ಲಕ್ನೋ- ಸೀದಾ ದೇವಸ್ಥಾನಕ್ಕೆ ಹೋದ ಆ ಹುಡುಗ ಏಕಾಏಕಿಯಾಗಿ ತನ್ನ ನಾಲಿಗೆಯನ್ನು ತಾನೇ ಕತ್ತರಿಸಿಕೊಂಡು ದೇವರಿಗೆ ಅರ್ಪಿಸಿದ್ದಾನೆ. ಉತ್ತರ ಪ್ರದೇಶದ ಬಬೇರು ಪ್ರದೇಶದಲ್ಲಿ ನಡೆದ ಈ ಘಟನೆ ಎಲ್ಲರನ್ನೂ ನಿಬ್ಬೆರಗಾಗಿಸಿದೆ.
ಹೀಗೆ ನಾಲಿಗೆ ಕತ್ತರಿಸಿಕೊಂಡ ಯುವಕ 22 ವರ್ಷ ವಯಸ್ಸಿನ ಆತ್ಮಾರಾಮ್. ಕಳೆದ ಶನಿವಾರ ಸ್ಥಳೀಯ ದೇವಸ್ಥಾನಕ್ಕೆ ಹೋದ ಈತ ದೇವರ ಮುಂದೆ ನಿಂತು ತನ್ನ ನಾಲಿಗೆಯನ್ನು ತಾನೇ ಕತ್ತರಿಸಿಕೊಂಡಿದ್ದಾನೆ. ಕತ್ತರಿಸಿದ ನಾಲಿಗೆಯನ್ನು ದೇವರಿಗೆ ಅರ್ಪಿಸಿದ್ದಾನೆ. ಇದನ್ನು ಕಂಡ ಸ್ಥಳೀಯರು ಕೂಡಲೇ ಅವನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಪಡೆದಿರುವ ಆತ್ಮಾರಾಮ್ ಈಗ ಚೇತರಿಸಿಕೊಂಡಿದ್ದಾನೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆತ್ಮಾರಾಮ್ ತಂದೆ ತಮ್ಮ ಮಗ ಮಾನಸಿಕ ಅಸ್ವಸ್ಥನಾಗಿದ್ದಾನೆ. ನವರಾತ್ರಿ ಉಪವಾಸ ಸಂದರ್ಭದಲ್ಲಿ ಈ ರೀತಿ ಅವಘಡ ಮಾಡಿಕೊಂಡಿದ್ದಾನೆ ಎಂದಿದ್ದಾರೆ. ಈ ಬಗ್ಗೆ ಪೊಲೀಸ್ ತನಿಖೆ ನಡೆದಿದೆ.
PublicNext
26/10/2020 09:53 am