ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸ್ಪಾ ಹೆಸರಲ್ಲಿ ಸೆಕ್ಸ್ ದಂಧೆ : ಕರಾಳ ಮುಖ ಬಯಲಿಗೆಳೆದ ಪೊಲೀಸ್

ಜೈಪುರ: ಗ್ರಾಹಕನ ವೇಷದಲ್ಲಿ ಸ್ಪಾಗೆ ಎಂಟ್ರಿ ಕೊಟ್ಟ ಪೊಲೀಸ್ ಸ್ಪಾ, ಮಸಾಜ್ ಹೆಸರಲ್ಲಿ ನಡೆಸುತ್ತಿದ್ದ ಸೆಕ್ಸ್ ದಂಧೆಯನ್ನು ಮಟ್ಟಹಾಕಿದ್ದಾರೆ.

ಸ್ಪಾ ಸೆಂಟರ್ ಮೇಲೆ ದಾಳಿ ನಡೆಸಿದ ಪೊಲೀಸರು, 12 ಜನರನ್ನ ಅರೆಸ್ಟ್ ಮಾಡಿರುವ ಘಟನೆ ರಾಜಸ್ಥಾನದ ಅಲ್ವಾರ ಜಿಲ್ಲೆಯ ಬಿವಢಿ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇನ್ನೂ ದಾಳಿ ವೇಳೆ ಬಂಧಿಸಿರುವ 9 ಯುವತಿಯರು ಸೇರಿದಂತೆ 12 ಜನರನ್ನ ಫೂಲ್ ಬಾಗ್ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ನಡೆಸಲಾಗುತ್ತಿದೆ.

ದೆಹಲಿ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಿಂದ ಯುವತಿಯರನ್ನ ದಂಧೆಗೆ ಕರೆಸಿಕೊಳ್ಳಲಾಗುತ್ತಿತ್ತು.

ಸ್ಪಾ ಹೆಸರಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ಮೌಖಿಕ ದೂರುಗಳು ಬಂದಿದ್ದವು. ಈ ಹಿನ್ನೆಲೆ ಪೊಲೀಸರೊಬ್ಬರು ಗ್ರಾಹಕರಾಗಿ ಹೋದಾಗ ರಹಸ್ಯ ಬಯಲಾಗಿದೆ.

ದೇಶದ ರಾಜಧಾನಿಯ ತಿಲಕ್ ನಗರದಲ್ಲಿ ಸ್ಪಾ ಹೆಸರಲ್ಲಿ ನಡೆಯುತ್ತಿದ್ದ ಸೆಕ್ಸ್ ದಂಧೆಯ ಮೇಲೆ ದೆಹಲಿಯ ಮಹಿಳಾ ಆಯೋಗ ಸೆಪ್ಟೆಂಬರ್ ನಲ್ಲಿ ದಾಳಿ ನಡೆಸಿತ್ತು.

Edited By : Nirmala Aralikatti
PublicNext

PublicNext

19/10/2020 09:31 am

Cinque Terre

54.72 K

Cinque Terre

1

ಸಂಬಂಧಿತ ಸುದ್ದಿ