ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿದ್ಯಾರ್ಥಿನಿಯನ್ನ ಅಪಹರಿಸಿ ಐವರಿಂದ ರಾತ್ರಿಯಿಡೀ ಸಾಮೂಹಿಕ ಅತ್ಯಾಚಾರ

ರಾಂಚಿ: ಅಪ್ರಾಪ್ತ ವಿದ್ಯಾರ್ಥಿನಿಯನ್ನ ಅಪಹರಿಸಿ ಐವರು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಜಾರ್ಖಂಡ್ ರಾಜ್ಯದ ಗುಮ್ಲಾದ ಚೈನಪುರ ವ್ಯಾಪ್ತಿಯಲ್ಲಿ ನಡೆದಿದೆ.

ಆರೋಪಿಗಳು ಶನಿವಾರ ರಾತ್ರಿ ಬಾಲಕಿಯನ್ನ ಆಕೆಯ ಮನೆಯಿಂದ ಅಪಹರಿಸಿ ರಾತ್ರಿಯಿಡೀ ಅತ್ಯಾಚಾರ ಎಸಗಿದ್ದಾರೆ. ಭಾನುವಾರ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರಿಗೆ ದೂರು ನೀಡದಂತೆ ಸಂತ್ರಸ್ತೆಯ ಪೋಷಕರಿಗೆ ಆರೋಪಿಗಳು ಜೀವ ಬೆದರಿಕೆ ಹಾಕಿದ್ದಾರೆ. ಅಷ್ಟೇ ಅಲ್ಲದೆ ಮಾರಣಾಂತಿಕ ಹಲ್ಲೆ ಸಹ ನಡೆಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಐವರು ಆರೋಪಿಗಳನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಇತ್ತ ಘಟನೆಯ ಬಳಿಕ ಗ್ರಾಮ ಪಂಚಾಯ್ತಿ ಮುಖಂಡರ ನೇತೃತ್ವದಲ್ಲಿ ಸಭೆ ನಡೆಸಿ, ದೂರು ದಾಖಲಿಸದಂತೆ ಬಾಲಕಿಯ ಕುಟುಂಬಸ್ಥರಿಗೆ ಒತ್ತಡ ಹಾಕಲಾಗಿದೆ. ಒಂದು ವೇಳೆ ದೂರು ದಾಖಲಾದರೆ ಸಂತ್ರಸ್ತೆಯನ್ನು ಕೊಲೆಗೈದು ಮನೆಗೆ ಬೆಂಕಿ ಹಚ್ಚುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

Edited By : Vijay Kumar
PublicNext

PublicNext

13/10/2020 03:01 pm

Cinque Terre

62.61 K

Cinque Terre

2

ಸಂಬಂಧಿತ ಸುದ್ದಿ