ಬೆಂಗಳೂರು: ವ್ಯಕ್ತಿಯೊಬ್ಬ ಪತ್ನಿಯ ಗುಪ್ತಾಂಗಕ್ಕೆ ಪೆಟ್ರೋಲ್ ಸುರಿದು ಬೆಂಕಿಯಿಟ್ಟು ಅಮಾನವೀಯ ಕೃತ್ಯ ಎಸೆಗಿದ ಘಟನೆ ಬೆಂಗಳೂರಿನ ಟಿಸಿ ಪಾಳ್ಯದಲ್ಲಿ ನಡೆದಿದೆ.
ಆರೋಪಿ ಸೂರಜ್ ಸಿಂಗ್ ಕೃತ್ಯ ಎಸೆಗಿದ ಆರೋಪಿ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಪತ್ನಿ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದಾಳೆ. ಮದುವೆಯ ವೇಳೆ ವರದಕ್ಷಿಣೆ ಪಡೆದಿದ್ದರೂ ಸೂರಜ್ ಸಿಂಗ್ ತಾಯಿಯ ಜೊತೆ ಸೇರಿ ತವರು ಮನೆಯಿಂದ ಹಣ ತರುವಂತೆ ಪತ್ನಿಗೆ ಚಿತ್ರಹಿಂಸೆ ಕೊಡುತ್ತಿದ್ದ. ಹೀಗಾಗಿ ಪತ್ನಿ ಒಂದೇರಡು ಬಾರಿ ಹಣವನ್ನು ತಂದು ಕೊಟ್ಟಿದ್ದಳು. ಶುಕ್ರವಾರ ಗಲಾಟೆ ವಿಕೋಪಕ್ಕೆ ಹೋಗಿ ಪತ್ನಿಯ ಗುಪ್ತಾಂಗಕ್ಕೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟಿದ್ದಾನೆ. ಪತಿಯ ನೀಚ ಕೃತ್ಯಕ್ಕೆ ಬಲಿಯಾಗಿರೋ ಪತ್ನಿ ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಟ ಮಾಡುತ್ತಿದ್ದಾಳೆ.
ಈ ಘಟನೆ ಸಂಬಂಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹೀನ ಕೃತ್ಯದ ಬಳಿಕ ಆರೋಪಿ ಹಾಗೂ ಆತನ ತಾಯಿ ತಲೆಮರಿಸಿಕೊಂಡಿದ್ದಾರೆ ಎನ್ನಲಾಗಿದೆ.
PublicNext
10/10/2020 09:12 am