ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇವಸ್ಥಾನಕ್ಕೆ ತೆರಳಿದ್ದ ಬರ್ತ್ ಡೇ ಗರ್ಲ್ ಸೇರಿ ಒಂದೇ ಕುಟುಂಬದ ಮೂವರು ನೀರು ಪಾಲು

ಚೆನ್ನೈ: ಮಗಳ ಹುಟ್ಟುಹಬ್ಬದ ನಿಮಿತ್ತ ದೇವಸ್ಥಾನಕ್ಕೆ ತೆರಳಿದ್ದ ಒಂದೇ ಕುಟುಂಬದ ಮೂವರು ಕಾಲುವೆಯಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ ಮನಕಲಕುವ ಘಟನೆ ತಿರುಪ್ಪೂರು ಜಿಲ್ಲೆಯ ಪಲ್ಲಡಂ ಬಳಿ ನಡೆದಿದೆ.

ದೇವಿ (18), ಈಕೆಯ ಪತಿ ಸೇತುಪತಿ (23) ಮತ್ತು ದೇವಿಯ ಸಹೋದರಿ ಶರಣ್ಯಾ (12) ಎಂದು ಮೃತ ದುರ್ಧೈವಿಗಳು. ಪರಂಬಿಕುಲಂ-ಅಲಿಯಾರ್ ಯೋಜನೆ (ಪಿಎಪಿ) ಅಡಿ ನಿರ್ಮಿಸಲಾಗಿರುವ ಕಾಲೂವೆಯಲ್ಲಿ ಮಂಗಳವಾರ ಘಟನೆ ನಡೆದಿದೆ. ಶರಣ್ಯಾಳ ಹುಟ್ಟುಹಬ್ಬ ನಿಮಿತ್ತ ಕುಟುಂಬಸ್ಥರು ಮಂಗಳವಾರ ದೇವಾಲಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸಮೀಪದ ಕಾಲುವೆಯಲ್ಲಿ ಸ್ನಾನ ಮಾಡುತ್ತಿದ್ದ ಶರಣ್ಯಾ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದಳು. ಇದನ್ನು ಕಂಡು ತಕ್ಷಣವೇ ರಕ್ಷಣೆಗಾಗಿ ಕಾಲುವೆಗೆ ಹಾರಿದ್ದ ದೇವಿ ಮತ್ತು ಸೇತುಪತಿ ಕೂಡ ಕೊಚ್ಚಿ ಹೋಗಿದ್ದಾರೆ.

ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ, ರಕ್ಷಣಾ ಪಡೆ ಮತ್ತು ಪೊಲೀಸರು ಮೂವರಿಗಾಗಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಆದರೆ ಕತ್ತಲಾಗಿದ್ದರಿಂದ ಅಂದೂ ಯಾರ ಮೃತದೇಹವೂ ಪತ್ತೆಯಾಗಿರಲಿಲ್ಲ. ದೇವಿಯ ಮೃತದೇಹ ಬುಧವಾರ ಪತ್ತೆಯಾದರೆ, ಸೇತುಪತಿ ಮತ್ತು ಶರಣ್ಯಾಳ ಮೃತದೇಹ ಗುರುವಾರ ಪತ್ತೆಯಾಗಿವೆ.

Edited By : Vijay Kumar
PublicNext

PublicNext

09/10/2020 10:27 am

Cinque Terre

72.63 K

Cinque Terre

0