ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

Mobile Recharge ಹೆಸರಲ್ಲಿ ಲಕ್ಷಾಂತರ ಜನರಿಗೆ ಮಕ್ಮಲ್ ಟೋಪಿ....... ನಿಮ್ಮ PublicNext ದಿಂದ ವಂಚನೆ ಬಯಲಿಗೆ

ವಿಶೇಷ ಕಾರ್ಯಚರಣೆ : ಕೇಶವ ನಾಡಕರ್ಣಿ

ಕೊರೊನಾ ಲಾಕ್ಡೌನ್ ಸಮಯದಲ್ಲಿ ರಾಜ್ಯದಲ್ಲಿ ಉದ್ಯೋಗ ಕಳೆದುಕೊಂಡು ಬೀದಿ ಪಾಲಾದವರು ಲಕ್ಷ ಲಕ್ಷ ಜನ. ಇದೇ ಸಮಯದಲ್ಲಿ ಮನೆಯಲ್ಲಿಯೇ ಕುಳಿತು ಸಾವಿರಾರು, ಲಕ್ಷಾಂತರ ಹಣ ಗಳಿಸಿ ಎಂಬ ಬ್ಲೇಡ್ ಕಂಪನಿಗಳ ಜಾಹೀರಾತಿಗೆ ಮರುಳಾಗಿ ಮೋಸ ಹೋದವರಿಗೇನೂ ಕಡಿಮೆ ಇಲ್ಲ. ಇಂತಹ ವಂಚಕರು ಮಾಡಿದ್ದೇನು ಗೊತ್ತೆ? ಪ್ರತಿಷ್ಠಿತ Jio, aritel,Idea, Voda ಮೋಬೈಲ್ ಆಪರೇಟರ್ ಕಂಪನಿಗಳ ಹೆಸರು ಹಾಗೂ ಲೋಗೋಗಳನ್ನು ಅಕ್ರಮವಾಗಿ ಬಳಸಿ ನಿರುದ್ಯೋಗಿಗಳನ್ನು ಬಲೆಗೆ ಕೆಡವಿದ್ದಾರೆ.

ಒಂದು ವಿಷಯವಂತೂ ಸತ್ಯ. ಯಾವುದೇ ಮೋಬೈಲ್ ಆಪರೇಟರುಗಳು Mulit Level Marketing ಕಂಪನಿಗಳಿಗೆ ರಿಚಾರ್ಜ ಮಾಡಿಸಲು ಅನುಮತಿ ನೀಡಿಲ್ಲ.

ಕರ್ನಾಟಕದಾದ್ಯಂತ ಅದರಲ್ಲೂ ವಿಶೇಷವಾಗಿ ಮಂಗಳೂರು, ಬೆಂಗಳೂರು, ದಾವಣಗೆರೆ, ಹುಬ್ಬಳ್ಳಿ ಧಾರವಾಡ ನಗರಗಳಲ್ಲಿ ತಮ್ಮಪ್ರೊಮೋಟರ್ ಹಾಗೂ ಏಜೆಂಟರುಗಳನ್ನು ನೇಮಕ ಮಾಡಿ ವಂಚನೆ ಎಸಗಿದ್ದಾರೆ. ಅತ್ಯಂತ ಕಡಿಮೆ ಹಣದಲ್ಲಿ ವರ್ಷವಿಡಿ ಪ್ರಮುಖ ಕಂಪನಿಗಳ ರೀಚಾರ್ಜ್ ಸೌಲಭ್ಯ ಹಾಗೂ ಆಕರ್ಷಕ ಬಹುಮಾನಗಳ ಆಸೆ ತೋರಿಸಿ ಲಕ್ಷಾಂತರ ಜನರಿಂದ ಕೋಟ್ಯಂತರ ಹಣ ಲಪಟಾಯಿಸಿದ್ದಾರೆ.

ಭಾರಿ ಬಹುಮಾನ ಹಾಗೂ ಕಮಿಶನ್ ಆಸೆಗೆ ಬಿದ್ದು ತಮ್ಮ ಕೆಳಗೆ ನೂರಾರು ಪ್ರತಿನಿಧಿಗಳನ್ನು ನೇಮಕ ಮಾಡಿಕೊಂಡು ಅವರಿಂದ ಹಣ ವಸೂಲಿ ಮಾಡಿದವರು ಈಗ ಒದ್ದಾಡಬೇಕಾಗಿದೆ. ಏಕೆಂದರೆ ಇವರಿಂದ ಕ್ಯೋಟಂತರ ಹಣ ನುಂಗಿದ Mulit Level Marketing ಕಂಪನಿಗಳು ಬಂದಾಗಿ ಎಲ್ಲರಿಗೂ ಚಳ್ಳೇ ಹಣ್ಣು ತಿನ್ನಿಸಿವೆ.

ಏಜೆಂಟರುಗಳ ಮೂಲಕ ಸದಸ್ಯತ್ವ ಪಡೆದವರಿಗೆ 2-3 ತಿಂಗಳು ರಿಚಾರ್ಜ ಮಾಡಿದ ಆಸೆ ತೋರಿಸಿ ತಮ್ಮ ವೆಬ್ ಸೈಟ್ ಕ್ಲೋಸ್ ಮಾಡಿದ್ದಾರೆ. ಅತ್ತ ರಿಚಾರ್ಜು ಇಲ್ಲ ಇತ್ತ ಹಣವೂ ವಾಪಸ್ ಇಲ್ಲದೆ ಸದಸ್ಯತ್ವ ಪಡೆದರು ಏಜೆಂಟರುಗಳ ಬೆಂಡೆತ್ತುತ್ತಿದ್ದಾರೆ.

ಹಾಗಾದರೆ ಆ ಬ್ಲೇಡ್ ಕಂಪನಿಗಳು ಯಾವವು, ಯಾವ ರೀತಿ ಮೋಸ ಮಾಡತೊಡಗಿವೆ? ಇದು ದೇಶದ ಕಾನೂನಿಗೆ ಯಾವ ರೀತಿ ವಿರುದ್ಧವಾಗಿದೆ ಎಂಬುದನ್ನು ನಿಮ್ಮ PublicNext ಬಯಲಿಗೆಳೆಯಲಿದೆ. ನಿರೀಕ್ಷಿಸಿ ಶೀಘ್ರದಲ್ಲಿಯೇ ದಾಖಲೆಗಳೊಂದಿಗೆ ನಾವು ಇವರ ಮೋಸದ ಬಣ್ಣ ಬಯಲು ಮಾಡಲಿದ್ದೇವೆ.

Edited By :
PublicNext

PublicNext

08/10/2020 05:44 pm

Cinque Terre

136.61 K

Cinque Terre

12

ಸಂಬಂಧಿತ ಸುದ್ದಿ