ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಪೊದಯಲ್ಲಿ 50, 500, 2000 ಮುಖಬೆಲೆಯ ಕಂತೆ–ಕಂತೆ ನೋಟು ಪತ್ತೆ

ಚಿತ್ರದುರ್ಗ: ಚಳ್ಳಕೆರೆ ತಾಲೂಕಿನ ಬುಕ್ಲೊರಹಳ್ಳಿಯ ಜಮೀನೊಂದರ ಜಾಲಿಗಿಡದ ಪೊದಯಲ್ಲಿ 50, 100 ಹಾಗೂ 2,000 ಮುಖಬೆಲೆಯ ಹಣ ಪತ್ತೆಯಾಗಿದೆ.

ಹಣ ಯಾರಿಗೆ ಸೇರಿದ್ದು, ಯಾರು ತಂದು ಎಸೆದಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿಲ್ಲ. ಆದರೆ ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಿರ್ವಹಿಸುತ್ತಿರುವ ದಿಲೀಪ್ ಬ್ಯುಲ್ಡ್‌ ಕಂಪನಿಯ ಕಚೇರಿ ಸಮೀಪದಲ್ಲೇ ಹಣ ಪತ್ತೆಯಾಗಿದೆ. ಕೆಲ ದಿನಗಳ ಹಿಂದಷ್ಟೇ ದಿಲೀಪ್ ಬ್ಯುಲ್ಡ್ ಕಚೇರಿಯಲ್ಲಿ 36 ಲಕ್ಷ ರೂ. ಕಳವಾಗಿತ್ತು.

ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದ ಸಿಪಿಐ ಮಂಜುನಾಥ್‌ ಹಾಗೂ ಎಸ್‌ಐ ಸತೀಶನಾಯ್ಕ್‌ ಪರಿಶೀಲನೆ ನಡೆಸಿದ್ದಾರೆ. ದಿಲೀಪ್ ಬ್ಯುಲ್ಡ್‌ ಕಂಪನಿಯಲ್ಲಿ ಕಳವಾಗಿದ್ದ ಹಣವನ್ನು ಕಳ್ಳರು ಬಿಸಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

Edited By : Vijay Kumar
PublicNext

PublicNext

08/10/2020 04:38 pm

Cinque Terre

51.28 K

Cinque Terre

1

ಸಂಬಂಧಿತ ಸುದ್ದಿ