ಜಾಹ್ನವಿ ಕಪೂರ್ ನಟನೆಯ ʻಮಿಲಿʼ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಒಂದು ನಿಮಿಷಕ್ಕೂ ಕಡಿಮೆ ಅವಧಿಯ ಟೀಸರ್ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದ್ದು, ಜಾಹ್ನವಿ ಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಕೋಲ್ಡ್ ಸ್ಟೋರೇಜ್ ರೂಮ್ʼನಲ್ಲಿ ಬಂಧಿಯಾಗಿರುವ ಕಥಾನಾಯಕಿ ಬಿಡುಗಡೆ ಹೊಂದಲು ನಡೆಸುವ ಹೋರಾಟದ ಸುತ್ತ ಈ ಚಿತ್ರದ ಕಥೆ ಹೆಣೆಯಲಾಗಿದೆ ಎಂಬುದನ್ನು ಟೀಸರ್ ಸೂಚಿಸುತ್ತದೆ.
ಸಸ್ಪೆನ್ಸ್, ಕ್ರೈಂ ಥ್ರಿಲ್ಲರ್ ಕಥಾಹಂದರವುಳ್ಳ ಚಿತ್ರ ನೈಜ ಘಟನೆ ಆಧರಿಸಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.ಮ್ಯಾತುಕುಟ್ಟಿ ಕ್ಸೇವಿಯರ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದರೆ, ಬೋನಿ ಕಪೂರ್ ಬಂಡವಾಳ ಹೂಡಿದ್ದಾರೆ. ನವೆಂಬರ್ 4ಕ್ಕೆ ಚಿತ್ರ ತೆರೆಕಾಣಲಿದೆ.
PublicNext
13/10/2022 01:36 pm