ಪಂಜಾಬಿ ಗಾಯಕ ಹನಿ ಸಿಂಗ್ ಮತ್ತು ಪತ್ನಿ ಶಾಲಿನಿ ತಲ್ವಾರ್ ದಾಂಪತ್ಯ ಜೀವನ ಮುರಿದು ಬೀಳುವ ಹಂತದಲ್ಲಿದೆ.
ಹೌದು ! ಪಂಜಾಬಿ ಗಾಯಕ ಹನಿ ಸಿಂಗ್ ಅವರಿಂದ ಪತ್ನಿ ಶಾಲಿನಿ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ, ಪತ್ನಿಗೆ ಗಾಯಕ ಹನಿ ಸಿಂಗ್ ಒಂದು ಕೋಟಿ ರೂಪಾಯಿಗಳ ಜೀವನಾಂಶ ನೀಡಲು ಹನಿ ಸಿಂಗ್ ಮುಂದಾಗಿದ್ದು, ಚೆಕ್'ನ್ನು ನ್ಯಾಯಾಲಯ ಮೂಲಕ ಹಸ್ತಾಂತರಿಸಲು ಮುಂದಾಗಿದ್ದಾರೆ ಎಂಬ ಮಾಹಿತಿ ವರದಿಯಾಗಿದೆ.
ಸದ್ಯ ಗಾಯಕ ಹನಿ ಸಿಂಗ್ ಪತ್ನಿ ಶಾಲಿನಿ ವಿಚ್ಛೇದನದ ಪ್ರಕರಣದ ಮುಂದಿನ ವಿಚಾರಣೆಯನ್ನು 2023ರ ಮಾರ್ಚ್ 22ಕ್ಕೆ ಕೋರ್ಟ್ ಮುಂದೂಡಲಾಗಿದೆ. ಶಾಲಿನಿ ಕಳೆದ ವರ್ಷ ತೀಸ್ ಹಜಾರಿ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಹನಿ ಸಿಂಗ್ ವಿರುದ್ಧ, ಇತರ ಮಹಿಳೆಯರೊಂದಿಗೆ ಲೈಂಗಿಕ ಸಂಬಂಧವಿದೆ ಎಂದು ಶಾಲಿನಿ ಆರೋಪಿಸಿದ್ದರು.
PublicNext
10/09/2022 12:46 pm