ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿರಂಜೀವಿ ನಟನೆಯ 'ಗಾಡ್ ಫಾದರ್' ಚಿತ್ರದ ಟೀಸರ್ ಆ.21ಕ್ಕೆ ರಿಲೀಸ್

ಹೈದರಾಬಾದ್: ಮೆಗಾ ಸ್ಟಾರ್ ಚಿರಂಜೀವಿ ನಟನೆಯ ಬಹುನಿರೀಕ್ಷಿತ 'ಗಾಡ್ ಫಾದರ್' ಚಿತ್ರದ ಟೀಸರ್ ಆಗಸ್ಟ್ 21ರಂದು ಬಿಡುಗಡೆ ಆಗಲಿದೆ‌.

ಈ ಕುರಿತು ಟ್ವೀಟ್ ಮಾಡಿರುವ ಖ್ಯಾತ ಸಿನಿ ವಿಮರ್ಶಕ ತರಣ್ ಆದರ್ಶ್, ಗಾಡ್ ಫಾದರ್ ಚಿತ್ರದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜತೆಗೆ ಸದ್ಯದ ಬೇಡಿಕೆಯ ನಟಿ ನಯನತಾರ ಕೂಡ ಈ ಚಿತ್ರದಲ್ಲಿ ಮಿಂಚಲಿದ್ದಾರೆ.

ಮೋಹನ್ ರಾಜಾ ನಿರ್ದೇಶನದ ಈ ಚಿತ್ರ ಇದೇ ವರ್ಷದ ದಸರಾ ವೇಳೆಗೆ ರಿಲೀಸ್ ಆಗಲಿದ್ದು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಲಿದೆ ಎನ್ನಲಾಗಿದೆ.

Edited By : Nagaraj Tulugeri
PublicNext

PublicNext

18/08/2022 07:18 pm

Cinque Terre

25.69 K

Cinque Terre

0