ಅರ್ಜುನ ರಡ್ಡಿ ಖ್ಯಾತಿಯ ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಡೇಟಿಂಗ್ ಮಾಡುತ್ತಿದ್ದರು ಎನ್ನುವುದನ್ನು ನಟಿ ಅನನ್ಯ ಪಾಂಡೆ ಹೇಳಿದ್ದರು. ಸದ್ಯ ಇದೇ ಬಾಲಿವುಡ್ ನಟಿ ಅನನ್ಯ ಪಾಂಡೆ ಮತ್ತು ವಿಜಯ್ ದೇವರಕೊಂಡ ನಡುವಿನ ಗಾಸಿಪ್ ಗಳು ಬಿಟೌನ್ ಕೇಳಿ ಬಂದಿದೆ.
ಕಾಫಿ ವಿತ್ ಕರಣ್ ಶೋನಲ್ಲಿ ವಿಜಯ್ ದೇವರಕೊಂಡ ಮತ್ತು ಅನನ್ಯ ಪಾಂಡೆ ಇಬ್ಬರೂ ಭಾಗಿಯಾಗಿದ್ದರು. ಇದೇ ವೇಳೆಯಲ್ಲಿ ಅನನ್ಯ ಪಾಂಡೆ ವಿಚಿತ್ರ ಬಯಕೆಯೊಂದನ್ನು ಶೋನಲ್ಲಿ ಹಂಚಿಕೊಂಡಿದ್ದಾರೆ. ಯಾವುದೇ ಮುಜಗರವಿಲ್ಲದೇ ‘ನೀವು ವಿಜಯ್ ದೇವರಕೊಂಡ ಅವರನ್ನು ಬೆತ್ತಲೆಯಾಗಿ ನೋಡುವುದಕ್ಕೆ ಇಷ್ಟಪಡುತ್ತೀರಾ’ ಎಂದು ಕರಣ್ ಶೋನಲ್ಲಿ ಕೇಳುತ್ತಾರೆ. ಕ್ಷಣವೂ ಯೋಚಿಸದ ಅನನ್ಯ ಪಾಂಡೆ. ಸಂಪೂರ್ಣ ಬೆತ್ತಲೆಯಾಗಿ ನೋಡುವುದಕ್ಕೆ ಇಷ್ಟಪಡುತ್ತೇನೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಸದ್ಯ ವಿಜಯ್ ದೇವರಕೊಂಡ ಮತ್ತು ಅನನ್ಯ ಪಾಂಡೆ ಲೈಗರ್ ಸಿನಿಮಾದಲ್ಲಿ ಜೊತೆಯಾಗಿ ನಟಿಸುತ್ತಿದ್ದಾರೆ. ಈ ನಡುವೆ ಇಂತಹ ಮಾತುಗಳು ರಶ್ಮಿಕಾ ಮಂದಣ್ಣ ಅಭಿಮಾನಿಗಳನ್ನು ಕೆರಳಿಸಿವೆ.
PublicNext
31/07/2022 06:25 pm