ಮಾರ್ವೆಲ್ ಸ್ಟುಡಿಯೋಸ್‌ನ 'ಥಾರ್: ಲವ್ ಅಂಡ್ ಥಂಡರ್' ಭಾರತದಲ್ಲಿ ಬಿಡುಗಡೆಯಾದ ಮೊದಲ ದಿನವೇ 18.60 ಕೋಟಿ ರೂ. ಗಳಿಸಿದೆ ಎಂದು ಚಲನಚಿತ್ರ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಹೇಳಿದ್ದಾರೆ.
ಹಿಂದಿ ಚಿತ್ರಗಳಾದ 'ಭೂಲ್ ಭುಲೈಯಾ 2' ಮತ್ತು 'ಸಾಮ್ರಾಟ್ ಪೃಥ್ವಿರಾಜ್' ಕ್ರಮವಾಗಿ 14.1 ಕೋಟಿ ರೂ. ಮತ್ತು 10.7 ಕೋಟಿ ರೂ. ಗಳಿಸಿದ್ದವು. ಕ್ರಿಸ್ ಹೆಮ್ಸ್‌ವರ್ತ್ ಮತ್ತು ಕ್ರಿಶ್ಚಿಯನ್ ಬೇಲ್ ನಟಿಸಿರುವ 'ಥಾರ್: ಲವ್ ಅಂಡ್ ಥಂಡರ್' ಚಿತ್ರವು ಭಾರತದಲ್ಲಿ ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿದೆ.
PublicNext
08/07/2022 06:00 pm