ಚಾಮರಾಜನಗರ: ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ತಮ್ಮ ಅಭಿಮಾನಿಯ ಟೀ ಅಂಗಡಿಗೆ ತೆರಳಿ ಸ್ಥಳೀಯರೊಂದಿಗೆ ಕುಳಿತು ಟೀ ಕುಡಿದಿದ್ದಾರೆ. ಈ ಮೂಲಕ ಅಭಿಮಾನಿಯ ಐದು ವರ್ಷಗಳ ಕನಸನ್ನು ನನಸು ಮಾಡಿದ್ದಾರೆ.
ಕಳೆದ ಐದು ವರ್ಷದಿಂದ ಅಭಿಮಾನಿಯೊಬ್ಬ ತಾನು ಮಾಡಿದ ಚಹದ ರುಚಿಯನ್ನು ತನ್ನ ನೆಚ್ಚಿನ ನಟ ಸವಿಯಬೇಕು ಎಂಬ ಇಂಗಿತ ವ್ಯಕ್ತಪಡಿಸಿದ್ದ.ಅಭಿಮಾನಿಯ ಈ ಆಸೆ ಈಡೇರಿಸಲು ಚಾಮರಾಜನಗರಕ್ಕೆ ತೆರಳಿದ್ದ ಶಿವಣ್ಣ ಟೀ ಅಂಗಡಿಗೆ ತೆರಳಿ ಅಲ್ಲಿನವರೊಂದಿಗೆ ಬೆರೆತು ಟೀ ಕುಡಿದಿದ್ದಾರೆ.
ಅಭಿಮಾನಿಯ ಟೀ ಅಂಗಡಿಯಲ್ಲಿ ಚಹಾ ಕುಡಿದ ಶಿವಣ್ಣ ಟೀ ಅಂಗಡಿ ಇಟ್ಟುಕೊಂಡಿರುವ ಮಂಜು ಕಳೆದ ಒಂದೂವರೆ ದಶಕದಿಂದ ಶಿವರಾಜ್ ಕುಮಾರ್ ಅಪ್ಪಟ ಅಭಿಮಾನಿಯಾಗಿದ್ದಾರೆ. 2016ರಿಂದಲೂ ತಮ್ಮ ಟೀ ಅಂಗಡಿಗೆ ಶಿವಣ್ಣನನ್ನು ಆಹ್ವಾನಿಸುತ್ತಿದ್ದರು. ಇನ್ನು ಶಿವಣ್ಣನನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದು, ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ.
PublicNext
05/07/2022 05:02 pm