ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯುವಕನಿಗೆ ವಾರ್ನಿಂಗ್ ಕೊಟ್ಟ ನಂದ ಕಿಶೋರ್ : ವಿಡಿಯೋ ವೈರಲ್

ನಟ ಕಿಚ್ಚ ಸುದೀಪ್ ಅವರ ಬಗ್ಗೆ ವ್ಯಕ್ತಿಯೊಬ್ಬ ಅವಹೇಳನಕಾರಿಯಾಗಿ ಮಾತನಾಡಿರುವುದಕ್ಕೆ ನಿರ್ದೇಶಕ ನಂದ ಕಿಶೋರ್ ಗರಂ ಆಗಿದ್ದಾರೆ. ಈ ಬಗ್ಗೆ ವಿಡಿಯೋ ಮಾಡಿದ ನಂದ ಕಿಶೋರ್ ಕನ್ನಡ ಚಿತ್ರರಂಗದ ಯಾವುದೇ ಕಲಾವಿದರ ಬಗ್ಗೆ ಮಾತನಾಡುವುದಕ್ಕೂ ಮುನ್ನ ಎಚ್ಚರಿಕೆ ಇರಲಿ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ.ಕನ್ನಡ ಚಿತ್ರರಂಗದ ಮೇರು ನಟ ಕಿಚ್ಚ ಸುದೀಪ್ ಅವರ ಬಗ್ಗೆ ವ್ಯಕ್ತಿಯೊಬ್ಬ ತುಂಬ ತುಚ್ಛವಾಗಿ ಮಾತನಾಡಿದ ಒಂದು ವಿಡಿಯೋ ವೈರಲ್ ಆಗಿದೆ.

‘ಸುದೀಪ್ ಅವರ ಸಾಧನೆ ದೊಡ್ಡದು. ಕನ್ನಡ ಚಿತ್ರರಂಗದ ಕಡೆಗೆ ಇಡೀ ಭಾರತೀಯ ಚಿತ್ರರಂಗ ತಿರುಗಿ ನೋಡುತ್ತಿದೆ ಎಂದರೆ ಅದಕ್ಕೆ ಇಂಥ ನಾಯಕರು ಕಾರಣ. ಅಂಥವರ ಬಗ್ಗೆ ದಾರಿಯಲ್ಲಿ ಹೋಗುವವರೆಲ್ಲ ಏನೋ ಒಂದು ಮಾತನಾಡುತ್ತಾರೆ ಎಂದರೆ ಬಹಳ ತಪ್ಪಾಗುತ್ತದೆ. ಕನ್ನಡದ ನಟರಿಗೆ ನಪುಂಸಕರು ಎಂದು ಹೇಳುವ ನಿನ್ನ ಭಾಷೆಯಲ್ಲಿಯೇ ಗೊತ್ತಾಗುತ್ತದೆ ನೀನು ಎಂಥ ಸಂಸ್ಕಾರದಿಂದ ಬಂದಿದ್ದೀಯ ಎಂಬುದು.

ನಿನ್ನ ಪ್ರಚಾರಕ್ಕಾಗಿ ಕನ್ನಡದ ಧೀಮಂತ ನಟರ ಹೆಸರನ್ನು ಉಪಯೋಗಿಸಿಕೊಂಡು, ಅವರಿಗೆ ಅವಹೇಳನಕಾರಿಯಾದ ಮಾತುಗಳನ್ನು ಹೇಳಿದ್ದೀಯ. ನೀನು ನಪುಂಸಕನಾಗಿಲ್ಲದೇ ಇದ್ದರೆ, ಈಗ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಎಲ್ಲಿದ್ದೀಯಾ?’ ಎಂದು ಖಡಕ್ ಆಗಿ ಕೇಳಿದ್ದಾರೆ ನಂದ ಕಿಶೋರ್.

Edited By : Nirmala Aralikatti
PublicNext

PublicNext

04/07/2022 08:51 pm

Cinque Terre

59.94 K

Cinque Terre

2