ಶಸ್ತ್ರದ ಚಿಕಿತ್ಸೆ ಬಳಿಕ ಇದೇ ಮೊದಲ ಬಾರಿಗೆ ವಿಡಿಯೋ ಹಂಚಿಕೊಂಡಿರುವ ನಟ ದಿಗಂತ್ ತಮ್ಮ ಅಪಘಾತದ ವೇಳೆಯಲ್ಲಿ ತಮಗೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.
ಗೋವಾದಲ್ಲಿ ಕುತ್ತಿಗೆಗೆ ಗಂಭೀರ ಗಾಯ ಮಾಡಿಕೊಂಡಿದ್ದ ದಿಗಂತ್ ಗೆ ಅಪರೇಷನ್ ಮಾಡಲಾಗಿತ್ತು. ಸದ್ಯ ಅವರ ಆರೋಗ್ಯ ಪರಿಸ್ಥಿತಿ ಸುಧಾರಿಸಿದೆ. ಈ ಮಧ್ಯೆ ದಿಗಂತ್ ಪತ್ನಿ ಹಾಗೂ ನಟಿ ಐಂದ್ರಿತಾ ರೇ ಸೋಷಿಯಲ್ ಮೀಡಿಯಾದಲ್ಲಿ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ ಹೇಳಿದ್ದರು.
ಸದ್ಯ ದಿಗಂತ್ ತಮ್ಮ ಅಪಘಾತದ ವೇಳೆಯಲ್ಲಿ ತಮಗೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ ತಿಳಿಸುವ ಮೂಲಕ ಕೃತಜ್ಞತೆಗಳನ್ನು ತಿಳಿಸಿದ್ದಾರೆ. ಇನ್ನು, ವಿಡಿಯೋದಲ್ಲಿ ದಿಗಂತ್ ಫಿಟ್ ಆದಂತೆ ಕಾಣುತ್ತಿದ್ದು, ಚೇತರಿಸಿಕೊಂಡಿದ್ದಾರೆ.
PublicNext
02/07/2022 10:53 pm