ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಣ್ಣು ಮಗುವಿಗೆ ಜನ್ಮ ನೀಡಿದ‌ ನಟಿ ಪ್ರಣಿತಾ ಸುಭಾಷ್

ಖ್ಯಾತ ಬಹುಭಾಷಾ ನಟಿ ಪ್ರಣಿತಾ ಸುಭಾಷ್ ಅವರು ಗುಡ್​ ನ್ಯೂಸ್​ ನೀಡಿದ್ದಾರೆ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅವರು ಇತ್ತೀಚೆಗೆ ಪ್ರೆಗ್ನೆಂಟ್ ಆಗಿರುವ ವಿಚಾರ ಹೇಳಿಕೊಂಡಿದ್ದರು. ಈಗ ಅವರ ಮನೆಗೆ ಹೆಣ್ಣು ಮಗುವಿನ ಆಗಮನ ಆಗಿದೆ. ಈ ವಿಚಾರವನ್ನು ಪ್ರಣಿತಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಪ್ರಣಿತಾ ಅವರು ಕಳೆದ ವರ್ಷ ಮೇ ತಿಂಗಳಲ್ಲಿ ಬೆಂಗಳೂರು ಮೂಲದ ಉದ್ಯಮಿ ನಿತಿನ್ ರಾಜು ಅವರನ್ನ ಮದುವೆಯಾಗಿದ್ದರು. ಈ ಹಿಂದೆ ಸೋಷಿಯಲ್​ ಮೀಡಿಯಾದಲ್ಲಿ ಪತಿ ಜೊತೆಗಿನ ಸ್ಪೆಷಲ್​ ಫೋಟೋವನ್ನು ಪೋಸ್ಟ್​ ಮಾಡುವ ಮೂಲಕ ತಾವು ಗರ್ಭಿಣಿಯಾಗಿರುವ ವಿಷಯ ಶೇರ್​ ಮಾಡಿದ್ದರು. ಇತ್ತೀಚೆಗಷ್ಟೇ ಬೇಬಿ ಬಂಪ್ ಹಾಗೂ ಸೀಮಂತ ಕಾರ್ಯಕ್ರಮದ ಫೋಟೋಗಳು ವೈರಲ್​ ಆಗಿದ್ದವು.

2010ರಲ್ಲಿ 'ಪೊರ್ಕಿ' ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಪ್ರಣಿತಾ, ಕಡಿಮೆ ಸಮಯದಲ್ಲಿ ಸ್ಟಾರ್ ನಟರಾದ ಶಿವರಾಜ್ ಕುಮಾರ್, ಗಣೇಶ್, ತೆಲುಗು ನಟ ಪವನ್ ಕಲ್ಯಾಣ್, ಸಿದ್ದಾರ್ಥ್ ಹಾಗೂ ತಮಿಳು ನಟ ಸೂರ್ಯ, ಬಾಲಿವುಡ್ ನಟ ಅಜಯ್ ದೇವಗನ್ ಜೊತೆ ನಟಿಸಿ ಅಭಿಮಾನಿಗಳ ಪ್ರೀತಿ ಗಳಿಸಿದ್ದಾರೆ.

Edited By : Vijay Kumar
PublicNext

PublicNext

11/06/2022 07:35 am

Cinque Terre

36.77 K

Cinque Terre

1