ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಟ ಸೂರ್ಯನಿಗೆ 47 ಲಕ್ಷದ ರೋಲೆಕ್ಸ್ ವಾಚ್ ಗಿಫ್ಟ್ ಕೊಟ್ಟ ಕಮಲ್ ಹಾಸನ್ !

ಚೆನ್ನೈ: ಕಾಲಿವುಡ್‌ನ ನಾಯಕ ನಟ ಕಮಲ್ ಹಾಸನ್ ಅಭಿನಯದ ವಿಕ್ರಮ್ ಚಿತ್ರ ಗೆದ್ದಿದೆ. ಇಲ್ಲಿವರೆಗೂ ಕಮಲ್ ಹಾಸನ್ ಚಿತ್ರಗಳಲ್ಲಿ 100 ಕೋಟಿ ಗಳಿಕೆ ಮಾಡಿದ ಚಿತ್ರಗಳಲ್ಲಿ ಇದು ಮೂರನೇ ಚಿತ್ರವೇ ಆಗಿದೆ. ಈ ಖುಷಿಯಲ್ಲಿಯೇ ಚಿತ್ರದಲ್ಲಿ ಅಭಿನಯಸಿದ ನಟ ಸೂರ್ಯನಿಗೆ ಕಮಲ್ ವಿಶೇಷ ಗಿಫ್ಟ್ ಕೊಟ್ಟಿದ್ದಾರೆ.

ವಿಕ್ರಮ್ ಚಿತ್ರದಲ್ಲಿ ಸೂರ್ಯ ರೋಲೆಕ್ಸ್ ಹೆಸರಿನ ಪಾತ್ರವನ್ನೇ ಮಾಡಿದ್ದಾರೆ. ಆ ಪಾತ್ರಕ್ಕೂ ಒಳ್ಳೆ ರೆಸ್ಪಾನ್ಸ್ ಕೂಡ ಪಡೆದಿದೆ. ಇದೇ ಖುಷಿಯಲ್ಲಿಯೇ ನಟ ಕಮಲ್ ಹಾಸನ್, ಸೂರ್ಯನಿಗೆ ತಮ್ಮ 47 ಲಕ್ಷದ ರೋಲೆಕ್ಸ್ ವಾಚ್ ಅನ್ನ ಗಿಫ್ಟ್ ಆಗಿಯೇ ಕೊಟ್ಟಿದ್ದಾರೆ.

ವಾಚ್ ಗಿಫ್ಟ್ ಆಗಿಯೇ ಸ್ವೀಕರಿಸಿದ ಸೂರ್ಯ, "ಇಂತಹ ಕ್ಷಣಗಳು ಬದುಕನ್ನ ಸುಂದರಗೊಳಿಸುತ್ತವೆ. ನಿಮ್ಮ ರೋಲೆಕ್ಸ್ ವಾಚ್‌ ಕೊಟ್ಟಿದ್ದಕ್ಕೆ ಧನ್ಯವಾದಗಳು ಅಣ್ಣಾ" ಅಂತಲೇ ಬರೆದುಕೊಂಡಿದ್ದಾರೆ.

Edited By :
PublicNext

PublicNext

08/06/2022 10:20 pm

Cinque Terre

55.3 K

Cinque Terre

3