ಹೈದ್ರಾಬಾದ್: ಕಾಲಿವುಡ್ ನ ಮಹಾನ್ ನಟ-ನಿರ್ದೇಶಕ ಕಮಲ್ ಹಾಸನ್ ಚಿತ್ರಗಳೇ ಗೆದ್ದಿರಲಿಲ್ಲ. ಬಂದ್ರು ಅಷ್ಟಕ್ಟೆ ಆಗಿದ್ದವು. ಆದರೆ, ಈಗ ಕಮಲ್ ಅಭಿನಯದ ವಿಕ್ರಮ್ ಚಿತ್ರ ಗೆದ್ದಿದೆ. ಇದೇ ಖುಷಿಯಲ್ಲಿ ಚಿತ್ರದ ನಿರ್ದೇಶಕನಿಗೆ ಕಮಲ್ ಹಾಸನ್ ವಿಶೇಷ ಗಿಫ್ಟ್ ಕೊಟ್ಟಿದ್ದಾರೆ.
ಹೌದು. ವಿಕ್ರಮ್ ಚಿತ್ರ ನಿರ್ದೇಶಕ ಲೋಕೇಶ್ ಕನಗರಾಜ್ ಗೆ ಕಮಲ್ ಹಾಸನ್ ದುಬಾರಿ ಬೆಲೆಯ ಲೆಕ್ಸೆಸ್ ಕಾರ್ ಕೊಟ್ಟಿದ್ದಾರೆ. ಇನ್ನೂ ವಿಶೇಷ ಅಂದ್ರೆ, ಸಹಾಯಕ ನಿರ್ದೇಶಕರಿಗೂ ಕಮಲ್ ಹಾಸನ್ ಅಪಾಚಿ ಬೈಕ್ ಉಡುಗೊರೆಯಾಗಿಯೆ ನೀಡಿದ್ದಾರೆ.
ವಿಕ್ರಮ್ ಚಿತ್ರ ರಿಲೀಸ್ ಆದ ನಾಲ್ಕು ದಿನಗಳಲ್ಲಿ 200 ಕೋಟಿ ಕ್ಲಬ್ ದಾಟಿದೆ ಅನ್ನೋ ಮಾಹಿತಿ ಇದೆ. ವಿಕ್ರಮ್ ಚಿತ್ರದ ಬಗ್ಗೆ ವಿಮರ್ಶಕರು ಒಳ್ಳೆಯ ರಿವ್ಯೂ ಕೊಟ್ಟಿದ್ದಾರೆ.
PublicNext
08/06/2022 03:55 pm