ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯ ಕೆಜಿಎಫ್-2 ಸಿನಿಮಾ ರಿಲೀಸ್ ಆಗಿ ಈಗ 50 ದಿನ ಪೂರೈಸಿದೆ. ಭಾರೀ ಗ್ರ್ಯಾಂಡ್ ಸಕ್ಸಸ್ ಕೂಡ ಕಂಡಿದೆ.ಕಜಿಎಫ್-2 ಚಿತ್ರ ತಂಡ ಈ ಖುಷಿಯನ್ನ ಬೆಂಗಳೂರಲ್ಲಿ ಸೆಲೆಬ್ರೇಟ್ ಮಾಡಿದೆ. ಈ ಒಂದು ಸಕ್ಸಸ್ ಪಾರ್ಟಿಯಲ್ಲಿ ಆ ನಾಯಕ ಎಂಟ್ರಿ ಕೊಟ್ಟು ಸರ್ಪ್ರೈಜ್ ಕೊಟ್ಟಿದ್ದಾರೆ.
ಹೌದು.ಬೆಂಗಳೂರಿನ ವರ್ಲ್ಡ್ ಟ್ರೇಡ್ ಸೆಂಟರ್ ಅಲ್ಲಿ ಕೆಜಿಎಫ್-2 ಚಿತ್ರದ ಸಕ್ಸಸ್ ಪಾರ್ಟಿ ಇತ್ತು. ಸ್ಯಾಂಡಲ್‌ವುಡ್ ನ ಬಹುತೇಕ ಸ್ಟಾರ್‌ಗಳು ಇಲ್ಲಿಗೆ ಆಗಮಿಸಿ ಖುಷಿ ಪಡ್ತಿದ್ದರು.
ಆದರೆ, ಸಡನ್ ಆಗಿಯೇ ಈ ಪಾರ್ಟಿಗೆ ಡಾರ್ಲಿಂಗ್ ಪ್ರಭಾಸ್ ಎಂಟ್ರಿ ಕೊಟ್ಟೇ ಬಿಟ್ಟರು. ಆ ಕ್ಷಣ ನಿಜಕ್ಕೂ ಇಲ್ಲಿದವರೆಲ್ಲ ಸರ್ಪ್ರೈಜ್ ಆದರು. ಆದರೆ, ಕೆಜಿಎಫ್-2 ಚಿತ್ರದ ಈ ಸಕ್ಸಸ್ ಮೀಟ್ ಇನ್ನೊಂದು ಕಾರಣಕ್ಕೂ ಆಯೋಜನೆ ಆಗಿತ್ತು.
ನಿಜ, ಕೆಜಿಎಫ್-2 ಚಿತ್ರದ ಡೈರೆಕ್ಟರ್ ಪ್ರಶಾಂತ್ ನೀಲ್ ಜನ್ಮ ದಿನವೂ ಇತ್ತು. ಈ ಕಾರಣಕ್ಕೆ ಈ ಪಾರ್ಟ್ ಆಯೋಜನೆ ಆಗಿತ್ತು. ಹಾಗೇನೆ ಪ್ರಭಾಸ್ ತಮ್ಮ ಸಲಾರ್ ಚಿತ್ರದ ಡೈರೆಕ್ಟರ್ ಪ್ರಶಾಂತ್ ನೀಲ್‌ಗೆ ವಿಶ್ ಮಾಡಲೆಂದೇ ಇಲ್ಲಿ ಬಂದು ಎಲ್ಲರಿಗೂ ಸರ್ಪೈಜ್ ಕೊಟ್ಟರು.
PublicNext
06/06/2022 07:20 am