ಮುಂಬೈ: ತಾಯಿಯಾಗಲಿರುವ ಬಾಲಿವುಡ್ ಬ್ಯೂಟಿ ಸೋನಮ್ ಕಪೂರ್ ತಮ್ಮ ಬೇಬಿ ಬಂಪ್ ಫೋಟೋವನ್ನು ಹಂಚಿಕೊಂಡಿದ್ದಾರೆ.
ಗರ್ಭಧಾರಣೆಯ ಬಗ್ಗೆ ಆಗಾಗ್ಗೆ ಫೋಟೋ ಮತ್ತು ವೀಡಿಯೊಗಳೊಂದಿಗೆ ಅಭಿಮಾನಿಗಳಿಗೆ ಅಪ್ ಡೇಟ್ ಮಾಡುತ್ತಿದ್ದಾರೆ. ಸೋಮವಾರ, ಇನ್ ಸ್ಟಾಗ್ರಾಮ್ ಸ್ಟೋರೀಸ್ ನಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ ಸೋನಮ್ ತನ್ನ ಗರ್ಭಧಾರಣೆಯ ಆಲ್ಬಮ್ ಗೆ ಮತ್ತೊಂದು ಫೋಟೋವನ್ನು ಸೇರಿಸಿದ್ದಾರೆ.
ಕಪ್ಪುಬಣ್ಣದ ವಸ್ತ್ರ ಧರಿಸಿರುವ ಸೋನಂ ಕಪೂರ್ ತಮ್ಮ ಬೇಬಿ ಬಂಪ್ ಫೋಟೋ ಹಂಚಿಕೊಂಡಿದ್ದಾರೆ. ಮಿರರ್ ಸೆಲ್ಫಿಯು ಸೋನಂ ಅವರ ಗರ್ಭಧಾರಣೆಯ ಹೊಳಪನ್ನು ಸೆರೆಹಿಡಿದಿದೆ. ನಟಿ ಸೋನಂ ಕಪೂರ್ ಮತ್ತು ಅವರ ಪತಿ ಆನಂದ್ ಅಹೂಜಾ ಮಾರ್ಚ್ನಲ್ಲಿ ತಾವು ತಾಯಿ-ತಂದೆಯಾಗುತ್ತಿರುವುದಾಗಿ ಘೋಷಿಸಿದರು.
PublicNext
30/05/2022 10:15 pm