ಬೆಂಗಳೂರು: ಆ್ಯಸಿಡ್ ದಾಳಿಗೆ ಒಳಗಾದ ಯುವತಿ ಕಳೆದ 25 ದಿನಗಳಿಂದ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸ್ತಿದ್ದಾಳೆ.ಇತ್ತ ವೈದ್ಯರು ಯುವತಿಗೆ ಚಿಕಿತ್ಸೆ ಮುಂದುವರೆಸಿದ್ದಾರೆ. ಇತ್ತ ಎರಡು ದಿನಗಳ ಹಿಂದೆ ಕೊನೆ ಹಂತದ ಸರ್ಜರಿ ಮಾಡಲಾಗಿದ್ದು ಚೇತರಿಸಿಕೊಳ್ಳುತ್ತಿದ್ದಾಳೆ. ಈ ನಡುವೆ ಸಂತ್ರಸ್ತೆಗೆ ಆರೋಪಿ ನಾಗೇಶ್ ಗೆ ಗುಂಡು ಹೊಡೆದ ಫೋಟೋ ನೋಡಿ ಖುಷಿಯಾಗಿದ್ದಾಳೆ.
ಕಳೆದ ಏಪ್ರಿಲ್ ನಲ್ಲಿ ಆರೋಪಿ ನಾಗೇಶ್ ಪ್ರೀತಿಗೆ ನಿರಾಕರಿಸಿದಕ್ಕೆ ಯುವತಿ ಮೇಲೆ ಆ್ಯಸಿಡ್ ಎರಚಿ ವಿಕೃತಿ ಮೆರೆದಿದ್ದ. ತಮಿಳುನಾಡಿನ ಆಶ್ರಮವೊಂದರಲ್ಲಿ ಅವಿತುಕೊಂಡಿದ್ದ ಆರೋಪಿಯನ್ನು ಬಂಧಿಸಿ ನಗರಕ್ಕೆ ಕರೆತರುವಾಗ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ನಾಗೇಶ್ ಮೇಲೆ ಪೊಲೀಸರು ಗುಂಡು ಹೊಡೆದಿದ್ದರು.
ಈ ಮಧ್ಯೆ ಆ್ಯಸಿಡ್ ದಾಳಿ ದೃಶ್ಯ ನೆನೆದುಕೊಂಡು ನೋವಿನಲ್ಲಿದ್ದ ಸಂತ್ರಸ್ತೆಗೆ ಪೊಲೀಸರು ಪೋಷಕರ ಮುಖಾಂತರ ಆರೋಪಿಗೆ ಕಾಲಿಗೆ ಹೊಡೆದು ಆಸ್ಪತ್ರೆಗೆ ಸೇರಿಸಿದ ಫೋಟೋ ತೋರಿಸಿದ್ದಾರೆ. ಫೋಟೋ ನೋಡಿದ ತಕ್ಷಣ ಯುವತಿ ಆತ್ಮಸ್ಥೈರ್ಯ ಹೆಚ್ಚಿಸಿಕೊಂಡಿದ್ದಾಳೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
PublicNext
24/05/2022 02:32 pm