ಬೆಂಗಳೂರು: ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಹಿರಿಯ ಪುತ್ರ ಮನೋರಂಜನ್ ಮದುವೆ ಫಿಕ್ಸ್ ಆಯಿತೇ ? ಹೌದು ಇಂತಹ ಒಂದು ಪ್ರಶ್ನೆ ಈಗ ಅತಿ ಕೇಳಲಾಗುತ್ತಿದೆ. ಕಾರಣ, ಆ ಒಂದು ಲಗ್ನಪತ್ರಿಕೆ. ಬನ್ನಿ, ಹೇಳ್ತಿವಿ.
ಮನೋರಂಜನ್ ಅಭಿನಯದ ಪ್ರಾರಂಭ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಆ ಚಿತ್ರದ ರಿಲೀಸ್ ದಿನವನ್ನ ಇಲ್ಲಿ ಮದುವೆ ಆಹ್ವಾನ ಪತ್ರಿಕೆಯಲ್ಲಿಯೇ ಹೇಳಿರೋದು ವಿಶೇಷವಾಗಿಯೇ ಕಾಣುತ್ತಿದೆ.
ಈ ವಿಶೇಷ ಪ್ರಯೋಗವನ್ನ ಎಲ್ಲರೂ ಮದುವೆ ಆಮಂತ್ರಣ ಪತ್ರಿಕೆ ಅಂತಲೇ ತಿಳಿದಿದ್ದು ರವಿಚಂದ್ರನ್ ಮಗನ ಮದುವೇ ಆಮಂತ್ರಣ ಪತ್ರಿಕೆ ಇದಾಗಿಯೇ ಅಂತಲೇ ನಂಬಿದ್ದಾರೆ.
ಅಂದ್ಹಾಗೆ ಮನೋರಂಜನ್ ಅಭಿನಯದ ಪ್ರಾರಂಭ ಚಿತ್ರ ಮೂರು ವರ್ಷದ ಹಿಂದೇನೆ ರೆಡಿ ಆಗಿದೆ. ಆದರೆ ರಿಲೀಸ್ ಭಾಗ್ಯ ಇದಕ್ಕೆ ಈಗ ಸಿಕ್ಕಿದೆ. ಇದೇ ಮೇ ತಿಂಗಳ 13 ನೇ ತಾರೀಖಿನಂದು ಚಿತ್ರ ರಿಲೀಸ್ ಆಗುತ್ತಿದೆ.
PublicNext
04/05/2022 10:44 am