ಬಹುಭಾಷಾ ನಟಿ ಸಂಜನಾ ಗಲ್ರಾನಿ ಅವರು ತಾಯಿಯಾಗುವ ಖುಷಿಯಲ್ಲಿದ್ದಾರೆ. ಇತ್ತೀಚೆಗೆ ಸೀಮಂತ ಶಾಸ್ತ್ರದ ಸಂಭ್ರಮ ಕ್ಷಣಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಸಂಜನಾ ಇದೀಗ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿದ್ದಾರೆ. ಈ ಫೋಟೋಗಳು ಸಖತ್ ವೈರಲ್ ಆಗುತ್ತಿವೆ.
'ಗಂಡ ಹೆಂಡತಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಿತರಾದ ನಟಿ ಸಂಜನಾ, ಬಳಿಕ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡರು. ಬಳಿಕ ಅಜೀಜ್ ಪಾಷಾ ಅವರೊಂದಿಗೆ ಸಂಜನಾ ವಿವಾಹವಾಗಿದ್ದರು.
PublicNext
29/04/2022 10:22 pm