ಬೆಂಗಳೂರು: ಹಿಂದಿ ಭಾಷೆ ಬಗ್ಗೆ ಸದ್ಯ ಭಾರೀ ಚರ್ಚೆಗಳು ನಡೆಯುತ್ತಿವೆ. ಹಿಂದಿ ಹೇರಿಕೆಯ ವಿಚಾರವೂ ಮತ್ತೆ ಮುನ್ನೆಲೆಗೆ ಬಂದಿದೆ. ಈ ಹೀಗಿರೋವಾಗ ತಿರುಪತಿಯಲ್ಲಿ ಈಗೊಂದು ಘಟನೆ ನಡೆದಿದೆ. ಆ ಘಟನೆ ನೋಡಿದ್ರೆ ನಿಮಗೂ ಸಿಟ್ಟು ಬರುತ್ತದೆ. ಅದರಲ್ಲೂ ನೀವೂ ಪುನೀತ್ ಫ್ಯಾನ್ಸ್ ಅಗಿದ್ದರೇ, ರಕ್ತ ಕುದ್ದು ಹೋಗುತ್ತದೆ. ಬನ್ನಿ, ಹೇಳ್ತೀವಿ.
ಪವರ್ ಸ್ಟಾರ್ ಪುನೀತ್ ಸರಳತೆಗೆ ಹೆಸರು ವಾಸಿ. ಚೆಂದದ ನಗುವಿಗೆ ಇವರೇ ರಾಜಕುಮಾರ್. ಆದರೆ, ಇಂತಹ ಸೂಪರ್ ಸ್ಟಾರ್ ಇರೋ ಸ್ಟಿಕರ್ ಅನ್ನ ಕಾರ್ ಮೇಲೆ ಹೆಚ್ಚಿದರೇ ಪೊಲೀಸರು ಅಂತಹ ಕಾರ್‌ಗಳನ್ನ ತಡೆಯುತ್ತಿದ್ದಾರೆ. ಇದನ್ನ ತೆಗೆಯದೇ ಇದ್ದರೇ ತಿರುಪತಿಗೆ ಪ್ರವೇಶ ಇಲ್ಲೇ ಇಲ್ಲ ಅಂತಲೇ ಹೇಳುತ್ತಿದ್ದಾರೆ.
ಈ ಘಟನೆಗೆ ಸಾಕ್ಷಿಯಾದ ಕಾರ್ ಚಾಲಕರೊಬ್ಬರ ವೀಡಿಯೋ ಒಂದು ಈಗ ಅತಿ ಹೆಚ್ಚು ವೈರಲ್ ಆಗುತ್ತಿದೆ. ಪುನೀತ್ ಸ್ಟಿಕರ್ ಜೊತೆಗೆ ಕನ್ನಡ ಶಾಲು ಧರಿಸಿದನ್ನೂ ಇಲ್ಲಿ ತಡೆಯಲಾಗಿದೆ. ಕನ್ನಡ ಶಾಲು ತೆಗೆದು ಬಿಡಿ ಅಂತಲೂ ಪೊಲೀಸರು ಹೇಳಿದ್ದಾರೆ. ಇದು ಕನ್ನಡ ಶಾಲು ಅಂತ ಇದನ್ನ ಯಾಕೆ ತಗೀತೀರಿ ಅಂತ ಕೇಳೋರಿಗೆ ದಯವಿಟ್ಟು ತೆಗೆದು ಬಿಡಿ ಅಂತಲೇ ಪೊಲೀಸ್ ಕೈ ಮುಗಿದು ಮುಂದೆ ಹೋಗಿ ಬಿಡ್ತಾರೆ. ಈ ಎಲ್ಲ ವಿಚಾರಗಳೂ ಈ ಒಂದು ವೈರಲ್ ವೀಡಿಯೋದಲ್ಲಿ ಇದ್ದೇ ಇದೆ.
PublicNext
28/04/2022 05:58 pm