ಚಿಕ್ಕಮಗಳೂರು: ನಗರದ ನಾಗಲಕ್ಷ್ಮೀ ಥಿಯೇಟರ್ ನಲ್ಲಿ ಕೆಜಿಎಫ್-2 ಚಿತ್ರ ಪ್ರದರ್ಶನ ಆಗದೇ ಇರೋ ಹಿನ್ನೆಲೆಯಲ್ಲಿಯೇ ಇಂದು ರಾಕಿಂಗ್ ಸ್ಟಾರ್ ಯಶ್ ಫ್ಯಾನ್ಸ್ ಸಿಟ್ಟಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಥಿಯೇಟರ್ ಮಾಲೀಕರ ವಿರುದ್ಧವೂ ಘೋಷಣೆ ಕೂಗಿ ಯಶ್ ಅಭಿಮಾನಿಗಳು ಪ್ರತಿಭಟನೆ ಮಾಡಿದ್ದಾರೆ. ಈ ಒಂದು ಪ್ರತಿಭಟನೆಯ ವಿಷಯ ತಿಳಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಯಶ್ ಫ್ಯಾನ್ಸ್ ಮನವಲಿಸೋವಲ್ಲಿ ಯಶಸ್ವಿ ಆಗಿದ್ದಾರೆ.
ಚಿತ್ರದ ನಾಯಕ ನಟ ಯಶ್ ಹಾಗೂ ವಿತರಕರ ಜೊತೆಗೆ ಮಾತನಾಡಿ ಚಿತ್ರ ರಿಲೀಸ್ ಮಾಡಿಸುವ ಭರವಸೆ ನೀಡಿದ್ದಾರೆ. ಹೀಗೆ ಭರವಸೆ ಕೊಟ್ಟ ಮೇಲೆನೆ ಯಶ್ ಫ್ಯಾನ್ಸ್ ಪ್ರತಿಭಟನೆ ಕೈ ಬಿಟ್ಟಿದ್ದಾರೆ.
ಅಂದ್ಹಾಗೆ ಈ ಥಿಯೇಟರ್ ನಲ್ಲಿ ಟ್ರಿಪಲ್ ಆರ್ ಚಿತ್ರ ಪ್ರದರ್ಶನ ಆಗುತ್ತಿದೆ. ಈ ಕಾರಣಕ್ಕೆನೇ ಇಲ್ಲಿ ಕೆಜಿಎಫ್-2 ಚಿತ್ರದ ಪ್ರರ್ಶನ ಆಗುತ್ತಿಲ್ಲ ಅಂತಲೇ ಬಲ್ಲ ಮೂಲಗಳು ಹೇಳುತ್ತಿವೆ.
PublicNext
13/04/2022 06:39 pm