ಟಾಲಿವುಡ್ ನ ಹೆಸರಾಂತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅಂದ್ರೆೇನೆ ಒಂದು ಗತ್ತು ಇತ್ತು. ಕ್ರೈಂ ಕಥೆ ಆಧರಿಸಿದ ಚಿತ್ರಗಳಿಗೆ RGV ತುಂಬಾ ಹೆಸರುವಾಸಿ. ಸಿನಿಮಾಗಳ ಮೂಲಕವೇ ಟ್ರೆಂಡ್ ಸೆಟ್ ಮಾಡಿದ್ದ ವರ್ಮಾ ಈಗ ಚಾರ್ಮ್ ಕಳೆದುಕೊಂಡಿದ್ದಾರೆ. ಈ ಹಿಂದೆ ವರ್ಮಾ ಚಿತ್ರ ಬಂದಾಗ ನಾಮುಂದು-ತಾಮುಂದು ಅಂತಲೇ ಥಿಯೇಟರ್ ನವರು ಚಿತ್ರ ರಿಲೀಸ್ ಮಾಡುತ್ತಿದ್ದರು. ಆದರೆ ಈಗ ನಾ ಒಲ್ಲೆ ನೀ ಒಲ್ಲೆ ಅಂತಿದ್ದಾರೆ.
ರಾಮ್ ಗೋಪಾಲ್ ವರ್ಮಾ ಸಿನಿಮಾಗಳ ಕಥೆ ಈಗ ಕ್ರೈಂ ನಿಂದ ಬಿ ಗ್ರೇಡ್ ಹಂತಕ್ಕೆ ಬಂದು ತಲುಪಿ ಬಿಟ್ಟಿದೆ. ಇವತ್ತು ರಿಲೀಸ್ ಆಗಬೇಕಿದ್ದ ಡೇಂಜರಸ್ ಸಿನಿಮಾನೇ ತೆಗೆದುಕೊಳ್ಳಿ. ಇದು ಲೆಸ್ಬಿಯನ್ ಕಥೆಯುಳ್ಳಿ ಸಿನಿಮಾ. ಇನೇನು ರಿಲೀಸ್ ಆಗಬೇಕು ಅನ್ನುವ ಹೊತ್ತಿಗೆ ಚಿತ್ರ ಪ್ರದರ್ಶಕರ ಡೇಂಜರಸ್ ಚಿತ್ರ ರಿಲೀಸ್ ಗೆ ನಿರಾಕರಿಸಿದ್ದಾರೆ.
ವರ್ಮಾ ಈಗಾಗಲೇ ಈ ಚಿತ್ರದ ಪ್ರಚಾರವನ್ನ ಹೈದ್ರಾಬಾದ್,ಬೆಂಗಳೂರು ಮತ್ತು ಚೆನ್ನೈ, ಮುಂಬೈನಲ್ಲೂ ಮಾಡಿದ್ದಾರೆ. ಆದರೆ, ಚಿತ್ರದಲ್ಲಿ ಸಲಿಂಗ ಪ್ರೇಮದ ಯುವತಿಯರ ಕಥೆ ಇದೆ. ಶೃಂಗಾರದ ಹಸಿಬಿಸಿ ದೃಶ್ಯಗಳೂ ಹೇರಳವಾಗಿಯೇ ಇವೆ. ಅದಕ್ಕೇನೆ ಈ ಚಿತ್ರ ಇವತ್ತು ಏ-8 ರಂದು ರಿಲೀಸ್ ಆಗಿಲ್ಲ. ನ್ಯಾಯಾಲಯದ ಮೊರೆ ಹೋಗಿ ಆದರೂ ಈ ಚಿತ್ರ ರಿಲೀಸ್ ಮಾಡಿಯೇ ತೀರುತ್ತೇನೆ ಎಂದ ರಾಮ್ ಗೋಪಾಲ ವರ್ಮಾ ಈಗ ಪಣತೊಟ್ಟು ನಿಂತಿದ್ದಾರೆ.
-ರೇವನ್ ಪಿ.ಜೇವೂರ್, ಎಂಟರಟೈನಮೆಂಟ್ ಬ್ಯೂರೋ
ಪಬ್ಲಿಕ್ ನೆಕ್ಸ್ಟ್ ,ಹುಬ್ಬಳ್ಳಿ
PublicNext
08/04/2022 09:17 pm