ರಾಕಿಂಗ್ ಸ್ಟಾರ್ ಯಶ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ಏ.14 ರಂದು ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಈ ಸಿನಿಮಾ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ.
ಅದಕ್ಕೂ ಮುನ್ನ ಇಂದು (ಮಾ.27) ಸಂಜೆ 6.40ಕ್ಕೆ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲು ಚಿತ್ರ ತಂಡ ಸಿದ್ಧತೆ ಮಾಡಿಕೊಂಡಿದೆ. ಬೆಂಗಳೂರಿಗೆ ಪ್ರತಿಷ್ಟಿತ ಸ್ಟಾರ್ ಹೋಟೆಲ್‌ನಲ್ಲಿ ಮಾಧ್ಯಮ ಗೋಷ್ಠಿ ನಡೆಯಲಿದೆ.
ಈ ಮೂಲಕ ಟ್ರೈಲರ್ ಬಿಡುಗಡೆ ಆಗುತ್ತಿದ್ದು ಭಾರತೀಯ ಭಾಷೆಯ 180ಕ್ಕೂ ಹೆಚ್ಚು ಬೇರೆ ಭಾಷೆಯ ಪತ್ರಕರ್ತರು ಇಂದು (ಮಾರ್ಚ್ 27) ಟ್ರೈಲರ್ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಈ ಟ್ರೈಲರ್ ಲಾಂಚ್ ಈವೆಂಟ್ ಮತ್ತಷ್ಟು ವಿಶೇಷತೆಯಿಂದ ಕೂಡಿದ್ದು ಅವುಗಳನ್ನು ನೋಡೋಣ ಬನ್ನಿ.
ಕನ್ನಡ, ತಮಿಳು, ತೆಲುಗು, ಮಲಯಾಳ ಮತ್ತು ಹಿಂದಿಯಲ್ಲಿ 'ಕೆಜಿಎಫ್ 2' ಏಕಕಾಲಕ್ಕೆ ರಿಲೀಸ್ ಆಗುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರೋದ್ರಿಂದ ಎಲ್ಲಾ ರೀತಿಯ ಸಿದ್ಧತೆಗಳನ್ನು ಚಿತ್ರತಂಡ ಮಾಡಿಕೊಂಡಿದೆ. ಅತೀ ದೊಡ್ಡ ಟ್ರೈಲರ್ ಲಾಂಚ್ ಈವೆಂಟ್ ಇದಾಗಿದ್ದು, ವಿಶೇಷ ಅಂದರೆ ದೇಶದ ಮೂಲೆ ಮೂಲೆಯಿಂದ ಸಿನಿಮಾ ಪತ್ರಕರ್ತರು ಇವತ್ತು ಒಂದೆಡೆ ಸೇರಲಿದ್ದಾರೆ. ಒರಾಯನ್ ಮಾಲ್‌ನಲ್ಲಿ ಮಾಧ್ಯಮ ಗೋಷ್ಠಿ ಮಾಡುವ ಮೂಲಕ ಟ್ರೈಲರ್ ಬಿಡುಗಡೆ ಆಗುತ್ತಿದ್ದು ಭಾರತೀಯ ಭಾಷೆಯ 180ಕ್ಕೂ ಹೆಚ್ಚು ಬೇರೆ ಭಾಷೆಯ ಪತ್ರಕರ್ತರು ಈ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
PublicNext
27/03/2022 01:41 pm