ವಿಚ್ಛೇದನದ ಬಳಿಕ ಬೋಲ್ಡ್ ಪಾತ್ರಗಳ ಮೂಲಕ ಸಿನಿರಸಿಕರು ಹುಬ್ಬೇರಿಸುವಂತೆ ನಟನೆ ಮಾಡುತ್ತಿರುವ ನಟಿ ಸಮಂತಾ ಇದೀಗ ಮದ್ಯಪಾನದ ಜಾಹೀರಾತಿನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
ಸದ್ಯ ನಟಿಯ ಲುಕ್ ಕಂಡ ನೆಟ್ಟಿಗರು ‘ಹಾಗೆಲ್ಲ ಮಾಡ್ಬೇಡಿ’ ಎಂದು ಅಭಿಮಾನಿಗಳು ಬುದ್ದಿ ಹೇಳಿದ್ದಾರೆ. ‘ನೀವು ಅಂತಹ ಕಾಸ್ಟ್ಯೂಮ್ ಹಾಕಿಕೊಳ್ಳುವುದು ನಮಗೆ ಇಷ್ಟವಿಲ್ಲ’ ಎಂದು ಕಾಮೆಂಟ್ ಕೂಡ ಮಾಡಿದ್ದಾರೆ.
ಆಲ್ಕೋಹಾಲ್ ಕಂಪೆನಿಯೊಂದರ ಜಾಹೀರಾತಿನಲ್ಲಿ ಸಮಂತಾ ಎರಡು ಬಗೆಯ ಕಾಸ್ಟ್ಯೂಮ್ ಧರಿಸಿದ್ದಾರೆ. ಇದನ್ನು ಕಂಡ ನೆಟ್ಟಿಗರು ‘ಇಂತಹ ಅರೆಬರೆ ಕಾಸ್ಟ್ಯೂಮ್ ಗಳಲ್ಲಿ ಕಾಣಿಸಿಕೊಳ್ಳಬೇಡಿ. ಆ ರೀತಿಯಲ್ಲಿ ನಿಮ್ಮನ್ನು ನಾವು ನೋಡಲು ಸಾಧ್ಯವಿಲ್ಲ’ ಎಂದು ಗರಂ ಆಗಿದ್ದಾರೆ.
ಸದ್ಯ ಸಮಂತಾ ಸಖತ್ತಾಗಿಯೇ ಟ್ರೋಲ್ ಆಗುತ್ತಿದ್ದಾರೆ.
PublicNext
10/03/2022 06:15 pm