ಬೆಂಗಳೂರು: ನಟ, ನಿರ್ದೇಶಕ, ನಿರ್ಮಾಪಕ ರಿಷಬ್ ಶೆಟ್ಟಿ ಅವರು ಎರಡನೇ ಬಾರಿಗೆ ತಂದೆ ಆಗಿದ್ದಾರೆ. ರಿಷಬ್ ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಖುಷಿಯ ಸಮಾಚಾರವನ್ನು ನಟ ರಿಷಬ್ ಶೆಟ್ಟಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಪತ್ನಿಯ ಜೊತೆಗೆ ಇರುವ ಫೋಟೋ ಟ್ವೀಟ್ ಮಾಡಿರುವ ರಿಷಬ್ ಅವರು, 'ಇಷ್ಟೇ ಚಂದದ ಮಗಳು ಹುಟ್ಟಿದ್ದಾಳೆ. ತಾಯಿ-ಮಗು ಆರೋಗ್ಯವಾಗಿದ್ದಾರೆ' ಎಂದು ಬರೆದುಕೊಂಡಿದ್ದಾರೆ.
2017ರಲ್ಲಿ ಪ್ರಗತಿ ಶೆಟ್ಟಿ ಜೊತೆ ರಿಷಬ್ ಶೆಟ್ಟಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿಗೆ 2019ರಲ್ಲಿ ಮೊದಲ ಮಗು ಜನಿಸಿತು. ಪುತ್ರನಿಗೆ ರಣ್ವಿತ್ ಶೆಟ್ಟಿ ಎಂದು ಹೆಸರು ಇಟ್ಟಿದ್ದಾರೆ. ಈಗ ಎರಡನೇ ಮಗುವಿಗೆ ಪ್ರಗತಿ ಶೆಟ್ಟಿ ಜನ್ಮ ನೀಡಿರುವುದು ಅವರ ಕುಟುಂಬದಲ್ಲಿ ಖುಷಿ ತಂದಿದೆ.
PublicNext
04/03/2022 03:04 pm