ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಾಕುಂತಲೆ ಲುಕ್ ನಲ್ಲಿ ಸಮಂತಾ : ‘ಶಾಕುಂತಲಂ’ ಫಸ್ಟ್ ಲುಕ್ ಫ್ಯಾನ್ಸ್ ಫುಲ್ ಥ್ರಿಲ್

‘ಪುಷ್ಪ’ ಐಟಮ್ ಸಾಂಗ್ ನಲ್ಲಿ ಸಮಂತಾ ಹಾಟ್ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದರು ಸದ್ಯ ಸಮಂತಾ ಶಾಕುಂತಲೆ ಲುಕ್ ಗೆ ಫ್ಯಾನ್ಸ್ ಫುಲ್ ಥ್ರಿಲ್ ಆಗಿದ್ದಾರೆ. ಸಮಂತಾ ರುತು ಪ್ರಭು ಅಭಿನಯದ ಶಾಕುಂತಲಂ ತೆಲುಗು ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ. ಕಾಡಿನ ಆಶ್ರಮದ ಸುಂದರ ವಾತಾವರಣದಲ್ಲಿ ಪ್ರಾಣಿ ಪಕ್ಷಿಗಳ ಜೊತೆ ಶ್ವೇತ ವಸ್ತ್ರಧಾರಿಯಾಗಿ ಕಾಣಿಸಿಕೊಂಡಿರುವ ಸಮಂತಾ ಲುಕ್ ಅಭಿಮಾನಿಗಳಿಗೆ ಚಿತ್ರದ ನಿರೀಕ್ಷೆಯನ್ನು ಹೆಚ್ಚಿಸಿದೆ.

ಪೌರಾಣಿಕ ಕಥೆ ಆಧರಿತ ಚಿತ್ರ ಇದಾಗಿದ್ದು, ಶಾಕುಂತಲೆ ಮತ್ತು ದುಷ್ಯಂತ ನಡುವಿನ ಮಹಾಕಾವ್ಯದ ಪ್ರೇಮಕಥೆಯನ್ನು ತಿಳಿಸುತ್ತದೆ. ಇದು ಮಹಾಭಾರತದ ಆದಿ ಪರ್ವದ ರೂಪಾಂತರವಾಗಿದೆ. ರಾಣಿ ಶಕುಂತಲಾ ದೇವಿ ಪಾತ್ರದಲ್ಲಿ ಸಮಂತಾ ನಟಿಸಿರುವ ಈ ಚಿತ್ರವನ್ನು ಗುಣಶೇಖರ್ ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಗುಣಶೇಕರ್ ಈ ಹಿಂದೆ ಅನುಷ್ಕಾ ಶೆಟ್ಟಿಗೆ ರುದ್ರಮ್ಮದೇವಿ ಚಿತ್ರವನ್ನ ನಿರ್ದೇಶಿಸಿದ್ದರು.

ಉಳಿದ ಪಾತ್ರಗಳಲ್ಲಿ ರಾಜ ದುಷ್ಯಂತನಾಗಿ ದೇವ್ ಮೋಹನ್ ನಟಿಸಿದ್ದಾರೆ. ಅಲ್ಲು ಅರ್ಜುನ್ ನ ಮಗಳು ಅಲ್ಲು ಅರ್ಹಾ ರಾಜಕುಮಾರ ಭರತನಾಗಿ ಕಾಣಿಸಿಕೊಂಡಿದ್ದಾರೆ.

Edited By : Nirmala Aralikatti
PublicNext

PublicNext

28/02/2022 05:21 pm

Cinque Terre

27.89 K

Cinque Terre

0