ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆಜಿಎಫ್-2 ಚಿತ್ರಕ್ಕೆ ಟಕ್ಕರ್ ಕೊಡಲು ಬರ್ತಿದೆ ಜರ್ಸಿ !

ಮುಂಬೈ: ಬಾಲಿವುಡ್ ಅಂಗಳದಲ್ಲಿ ಕನ್ನಡದ ಕೆಜಿಎಫ್-2 ಸಿನಿಮಾದ ಹವಾ ಬೇರೆ ರೀತಿನೇ ಇದೆ. ಈ ಚಿತ್ರಕ್ಕೆ ಶಾಹೀದ್ ಕಪೂರ್ ಅಭಿನಯದ ಜರ್ಸಿ ಚಿತ್ರ ಟಕ್ಕರ್ ಕೊಡಲು ಸಜ್ಜಾಗಿ ಬಿಟ್ಟಿದೆ. ಯಾವುದೇ ಚಿತ್ರ ಕೆಜಿಎಫ್ ಎದುರು ಬರ್ತಿಲ್ಲ ಅಂದುಕೊಂಡೋರಿಗೆ ಜರ್ನಿ ಶಾಕ್ ಕೊಟ್ಟಿದೆ.

ಹೌದು! ಕೆಜಿಎಫ್-2 ಚಿತ್ರ ಏಪ್ರಿಲ್-14 ರಂದು ರಿಲೀಸ್ ಆಗುತ್ತಿದೆ. ಇದರ ಎದುರು ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚೆಡ್ಡಾ ಬರೋದಿತ್ತು. ಆದರೆ ಅದು ಈಗಾಗಲೇ ಮೂರು ತಿಂಗಳು ಮುಂದಕ್ಕೆ ಹೋಗಿದೆ. ಆದರೆ ಇದೇ ಕೆಜಿಎಫ್-2 ಚಿತ್ರ ರಿಲೀಸ್ ಆಗೋ ದಿನವೇ ಶಾಹೀದ್ ಕಪೂರ್ ಅಭಿನಯದ ಜರ್ಸಿ ರಿಲೀಸ್ ಆಗ್ತಿದೆ.

ಜರ್ಸಿ ಚಿತ್ರ ಕ್ರಿಕೆಟ್ ಸುತ್ತವೇ ಇರೋ ಸಿನಿಮಾ. ತೆಲುಗುದಲ್ಲಿ ಈಗಾಗಲೇ ರಿಲೀಸ್ ಆಗಿ ಹಿಟ್ ಆಗಿದೆ. ಅದೇ ಚಿತ್ರದ ಹಿಂದಿ ರಿಮೇಕ್ ಈ ಜರ್ಸಿ ಸಿನಿಮಾ. ಕೆಜಿಎಫ್-2 ಗೆ ಟಕ್ಕರ್ ಕೊಡಲು ಸಜ್ಜಾಗಿದೆ.

Edited By :
PublicNext

PublicNext

18/02/2022 04:49 pm

Cinque Terre

52.2 K

Cinque Terre

4