ಬೆಂಗಳೂರು: ಉತ್ತಮ ನಟನೆ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ಸ್ಯಾಂಡಲ್ ವುಡ್ ನಟಿ ಶ್ರೀಲೀಲಾ ಇದೀಗ ಅನಾಥಾಶ್ರನಮ ಇಬ್ಬರು ಮಕ್ಕಳನ್ನು ದತ್ತು ಪಡೆದುಕೊಳ್ಳುವ ಮೂಲಕವಾಗಿ ಮಾನವೀಯತೆ ಮೆರೆದಿದ್ದಾರೆ.
ಶ್ರೀಲೀಲಾ ಬೈ ಟು ಲವ್ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಿದ್ದಾರೆ. ಈ ವೇಳೆ ಅವರು ಅನಾಥಾಶ್ರಮವೊಂದಕ್ಕೆ ಭೇಟಿ ನೀಡಿ ಅಲ್ಲಿನ ಮಕ್ಕಳ ಸ್ಥಿತಿ ನೋಡಿ, ಇಬ್ಬರು ಪುಟ್ಟ ಮಕ್ಕಳನ್ನು ದತ್ತು ಪಡೆದಿದ್ದಾರೆ.
ಅನಾಥಾಶ್ರಮದ ಮಕ್ಕಳಿಗೆ ತಿಂಡಿ,ತಿನಿಸು ಹಂಚಿ ಅವರೊಂದಿಗೆ ಸಮಯ ಕಳೆದಿದ್ದಾರೆ. ಶಿಕ್ಷಣ, ನಟನೆ ಜೊತೆಗೆ ಶ್ರೀಲೀಲಾ ಸಾಮಾಜಿಕ ಕೆಲಸ ಮಾಡಲು ಮುಂದಾಗಿದ್ದಾರೆ.
ಸದ್ಯ 10 ತಿಂಗಳ ಗುರು ಹಾಗೂ ಶೋಭಿತಾ ಎನ್ನುವ ವಿಕಲಚೇತನ ಎರಡು ಪುಟ್ಟ ಮಕ್ಕಳನ್ನು ದತ್ತು ಪಡೆದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
PublicNext
13/02/2022 03:07 pm