ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿರಿಯ ಛಾಯಾಗ್ರಾಹಕ ಡಿ.ಸಿ.ನಾಗೇಶ್ ನಿಧನ

ಬೆಂಗಳೂರು: ಸಿನಿಮಾ ಪತ್ರಿಕಾ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಹಿರಿಯ ಛಾಯಾಗ್ರಾಹಕ ಡಿ.ಸಿ.ನಾಗೇಶ್ ಇಂದು ಬೆಳಗ್ಗೆ ನಿಧನರಾಗಿದ್ದಾರೆ.

ಡಿ.ಸಿ.ನಾಗೇಶ್ ಅವರ ಅಗಲಿಕೆಗೆ ಸಂಸದೆ ಸುಮಲತಾ ಅಂಬರೀಷ್ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. 'ಕನ್ನಡ ಚಿತ್ರರಂಗದ ಹಿರಿಯ ತಲೆಮಾರಿನ ಅದೆಷ್ಟೋ ನಟ-ನಟಿಯರ ಛಾಯಾಚಿತ್ರಗಳನ್ನು ಸೆರೆಹಿಡಿದ ಹೆಗ್ಗಳಿಗೆ ಇವರದ್ದಾಗಿತ್ತು.

ಈ ಬಗ್ಗೆ ಫೇಸ್​ಬುಕ್​​ನಲ್ಲಿ ಸಂಸದೆ ಸುಮಲತಾ ಅಂಬರೀಷ್ ಬರೆದುಕೊಂಡಿರುವ, "ಸಿನಿಮಾ ಪತ್ರಿಕೋದ್ಯಮದ ಹಿರಿಯ ಛಾಯಾಗ್ರಾಹಕ ಡಿ.ಸಿ. ನಾಗೇಶ್ ಅವರ ನಿಧನದ ಸುದ್ದಿ ವೈಯಕ್ತಿಕವಾಗಿ ನನಗೆ ತುಂಬಾ ಆಘಾತ ತಂದಿದೆ. ಲವಲವಿಕೆಯಿಂದ ಮಾತನಾಡುತ್ತಲೇ ನಮ್ಮೆಲ್ಲರ ನೆನಪುಗಳನ್ನು ಸೆರೆ ಹಿಡಿಯುತ್ತಿದ್ದ ಅಪರೂಪದ ವ್ಯಕ್ತಿ ನಾಗೇಶ್ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸುವೆ. ಈ ನೋವು ಭರಿಸುವ ಶಕ್ತಿ ಅವರ ಕುಟುಂಬಕ್ಕೆ ನೀಡಲಿ" ಎಂದು ಪ್ರಾರ್ಥಿಸುವೆ ಎಂದಿದ್ದಾರೆ.

ಇಂದು ಸಂಜೆ 4 ಗಂಟೆ ಸುಮಾರಿಗೆ ವಿಲ್ಸನ್ ಗಾರ್ಡನ್ ಕ್ರಿಮಿಟೋರಿಯಂನಲ್ಲಿ ಡಿ.ಸಿ.ನಾಗೇಶ್ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇದೀಗ ನಾಗೇಶ್ ಅವರ ಅಂತಿಮ ದರ್ಶನ ಪಡೆಯಲು ಸಿನಿಮಾ ಗಣ್ಯರ ದಂಡೇ ಹರಿದು ಬರುತ್ತಿದೆ.

Edited By : Vijay Kumar
PublicNext

PublicNext

05/02/2022 02:05 pm

Cinque Terre

25.77 K

Cinque Terre

0

ಸಂಬಂಧಿತ ಸುದ್ದಿ