ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ತಮ್ಮ ಪುತ್ರಿ ಐರಾ ಳಿಗೆ ಕನ್ನಡದ ಪಾಠ ಮಾಡಿದ್ದಾರೆ. ಮಗಳ ಜೊತೆಗೆ ಚೇರ್ ಮೇಲೆ ಕುಳಿತುಕೊಂಡು ಕನ್ನಡದ ಅಕ್ಷರ ಮಾಲೆಯನ್ನ ಹೇಳಿಕೊಂಡ್ತಿದ್ದಾರೆ.
ಪತ್ನಿ ರಾಧಿಕಾ ಪಂಡಿತ್, ಅಪ್ಪ ಮತ್ತು ಮಗಳ ಈ ವೀಡಿಯೋವನ್ನ ಈಗ ಸೋಷಿಯಲ್ ಮೀಡಿಯಾದಲ್ಲೂ ಶೇರ್ ಮಾಡಿದ್ದಾರೆ.
ಹೌದು.ಕನ್ನಡದ ಸೂಪರ್ ಸ್ಟಾರ್ ರಾಕಿಂಗ್ ಸ್ಟರ್ ಯಶ್,ತಮ್ಮ ಮುದ್ದಿನ ಮಗಳು ಆರ್ಯಾಳಿಗೆ ಈಗಿನಿಂದಲೇ ಕನ್ನಡವನ್ನೂ ಹೇಳಿಕೊಡುತ್ತಿದ್ದಾರೆ. ಅ,ಆ,ಅಂತ ಹೇಳ್ತಾನೆ ಮಗಳಲ್ಲಿ ಕನ್ನಡ ಪ್ರೇಮವನ್ನ ಹೆಚ್ಚಿಸುತ್ತಿದ್ದಾರೆ. ಕನ್ನಡದ ಮೇಲಿನ ತಮ್ಮ ಅಭಿಮಾನವನ್ನೂ ಈ ರೀತಿ ಮೆರೆದಿದ್ದಾರೆ.
PublicNext
25/01/2022 11:43 am