ಮುಂಬೈ:ಬಾಲಿವುಡ್‌ನ ನಾಯಕ ನಟ ಸಲ್ಮಾನ್ ಖಾನ್ ಪನ್ವೇಲ್ ಫಾರ್ಮ್ ಹೌಸ್ ನಲ್ಲಿ ಸೆಲೆಬ್ರಿಟಿಗಳ ಶವವನ್ನ ಹೂತಿಡಲಾಗಿದೆ. ಮಕ್ಕಳ ಕಳ್ಳಸಾಗಾಣಿಕೆ ಕೂಡ ಇಲ್ಲಿ ಮಾಲಾಗುತ್ತಿದೆ. ಹೀಗಂತ ಫಾರ್ಮ್ ಹೌಸ್ ನೇಬರ್ ಈಗ ಸಲ್ಮಾನ್ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.
ಸಲ್ಮಾನ್ ಖಾನ್ ಫಾರ್ಮ್ ಹೌಸ್ ಪಕ್ಕದಲ್ಲಿಯೇ ಇರೋ ಕೇತನ್ ಕಕ್ಕಡ್ ಈ ರೀತಿ ಸ್ಫೋಟಕ ಆರೋಪ ಮಾಡಿದ್ದಾರೆ. ಇದರಿಂದ ಕೋಪಗೊಂಡ ಸಲ್ಮಾನ್ ಖಾನ್, ಮಾನಷ್ಟ ಮೊಕ್ಕದ್ದಮೆಯನ್ನೂ ಕಕ್ಕಡ್ ವಿರುದ್ಧ ಹಾಕಿದ್ದಾರೆ.
ಕೇತನ್ ಹೇಳೋ ಹಾಗೆ, ಈ ಫಾರ್ಮ್ ಹೌಸ್ ನಲ್ಲಿ ಸೆಲೆಬ್ರಿಟಿಗಳ ಶವನ್ನ ಹೂತಿಡಲಾಗಿದೆ. ಇಲ್ಲಿ ಮಕ್ಕಳ ಸಾಗಾಟವೂ ನಡೆಯುತ್ತಿದೆ. ಹೀಗೆ ಆರೋಪ ಮಾಡಿರೋ ಕೇತನ್, ತಮ್ಮ ಫಾರ್ಮ್ ಹೌಸ್ ಗೆ ಹೋಗುವ ದಾರಿಯನ್ನ ಈಗ ಸಲ್ಮಾನ್ ಖಾನ್ ಬಂದ್ ಮಾಡಿದ್ದಾರೆ ಅಂತಲೂ ದೂರಿದ್ದಾರೆ.
PublicNext
23/01/2022 05:44 pm