ಚಂಡೀಗಢ:ಬಾಲಿವುಡ್ ಖಳನಾಯಕ ನಟ ರಿಯಲ್ ಲೈಫ್‌ನಲ್ಲಿ ಶ್ರೀಸಾಮಾನ್ಯರ ಜೀವನದಲ್ಲಿ ಹೀರೋನೆ ಆಗಿದ್ದಾರೆ. ಕೋವಿಡ್ ಟೈಮ್ ನಲ್ಲಿ ಸೋನು ಸೂದ್ ಸಾಕಷ್ಟು ನೆರವಾಗಿದ್ದರು. ಈಗ ತಮ್ಮೂರಿನ ವಿದ್ಯಾರ್ಥಿನಿಗಳಿಗೆ ಪಿಂಕ್ ಸೈಕಲ್ ವಿತರಿಸೋ ಮೂಲಕ ಮತ್ತೊಂದು ಸಾಮಾಜಿಕ ಕಾರ್ಯ ಮಾಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಚಂಡೀಗಢ್‌ನ ಮೊಗಾ ಗ್ರಾಮವೇ ಸೋನು ಸೂದ್ ಊರು. ಇಲ್ಲಿಯ 8 ಮತ್ತು 12 ನೇ ತರಗತಿಯ ವಿದ್ಯಾರ್ಥಿನಿಯರಿಗೆ ಶಾಲಾ-ಕಾಲೇಜಿಗೆ ತೆರಳು ತೊಂದರೆ ಆಗುತ್ತಿದೆ. ಅದಕ್ಕೆನೇ ಪಿಂಕ್ ಸೈಕಲ್ ಕೊಟ್ಟಿದ್ದಾರೆ.
ಇದನ್ನ ಅರ್ಥಮಾಡಿಕೊಂಡೇ ಈಗ ಸಾವಿರ ವಿದ್ಯಾರ್ಥಿನಿಯರಿಗೆ ಸಾವಿರ ಸೈಕಲ್ ಕೊಟ್ಟಿದ್ದೇವೆ. ಇದು ನಮ್ಮ ಅಭಿಮಾನದ ಒಂದು ಭಾಗವೇ ಆಗಿದೆ ಅಂತಲೇ ಸೋನು ಸೂದ್ ಹೇಳಿದ್ದಾರೆ. ಅಣ್ಣನ ಈ ಕೆಲಸದಲ್ಲಿ ಸಹೋದರಿ ಮಾಳಿಕಾ ಸೂದ್ ಸಹ ಸಾಥ್ ಕೊಟ್ಟಿದ್ದಾರೆ.
PublicNext
05/01/2022 07:03 pm