ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಐಪಿಎಸ್ ಅಧಿಕಾರಿ ಪಾತ್ರದಲ್ಲಿ ಅಭಿನಯಿಸುವ ಬಯಕೆಯಿದೆ; ನಟಿ ರಚಿತಾರಾಂ

ಮಂಗಳೂರು: ಸಿನಿಮಾ ಜೀವನದಲ್ಲಿ ವಿವಿಧ ಪಾತ್ರಗಳನ್ನು ಮಾಡಿದ ನಾನು ಪೊಲೀಸ್ ಪಾತ್ರವನ್ನು ಇನ್ನೂ ಮಾಡಿಲ್ಲ‌. ಐಪಿಎಸ್ ಅಧಿಕಾರಿ ಪಾತ್ರದಲ್ಲಿ ಅಭಿನಯಿಸುವ ಬಯಕೆಯಿದೆ ಸ್ಯಾಂಡಲ್ ವುಡ್ ನಟಿ ರಚಿತಾರಾಂ ಹೇಳಿದರು.

ಮಂಗಳೂರಿಗೆ ಬಂದಿರುವ ಅವರು, ಮಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಆಗಮಿಸಿ ಮಾತನಾಡಿ, ನಿನ್ನೆನೇ ಮಂಗಳೂರಿಗೆ ನಾನು ಬಂದಿದ್ದು, ಗಂಟಲು ತೊಂದರೆ ಇದ್ದರೂ ಪಬ್ಬಾಸ್ ಗೆ ಹೋಗಿ ಐಸ್ ಕ್ರೀಂ ತಿಂದಿದ್ದೆ. ಬೆಳ್ಳಂಬೆಳಗ್ಗೆ ಮಂಗಳೂರಿಗೆ ಬಂದು ಕಣ್ಣು ಬಿಟ್ಟ ತಕ್ಷಣ ಸನ್ ಪ್ರೀಮಿಯಂ ಜಾಹಿರಾತು ಹೋಲ್ಡಿಂಗ್ ಕಂಡೆ, ಬಹಳ ಸಂತೋಷವಾಯಿತು ಎಂದು ಹೇಳಿದರು.

ಎರಡು ವರ್ಷಗಳ ಕೊರೊನಾ ಸಾಂಕ್ರಾಮಿಕ ಕಾಲಘಟ್ಟದಲ್ಲಿ ಪೊಲೀಸರ ಕಾರ್ಯಕ್ಕೆ ಹ್ಯಾಟ್ಸ್ಅಪ್ ಅನ್ನಲೇ ಬೇಕು. ಎಲ್ಲರೂ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಕಾರ್ಯ ನಿರ್ವಹಿಸಿದ್ದಾರೆ. ನಿಮ್ಮಿಂದಾಗಿ ನಮ್ಮ ಆರೋಗ್ಯ ಸುರಕ್ಷಿತವಾಗಿದೆ. ಇಂತಹ ಪೊಲೀಸರಿಗೆ ಒಳ್ಳೆಯ ಆರೋಗ್ಯ ಲಭಿಸಲಿ ಎಂದು ಹಾರೈಸಿದರು.

Edited By : Shivu K
PublicNext

PublicNext

24/12/2021 06:43 pm

Cinque Terre

106.99 K

Cinque Terre

4