ಬೆಂಗಳೂರು:ಕನ್ನಡದ ಹಿರಿಯ ನಿರ್ದೇಶಕ ಕೆ.ವಿ.ರಾಜು ಇಂದು ಬೆಳಗ್ಗೆ 8 ಗಂಟೆ ಹೊತ್ತಿಗೆ ನಿಧನರಾಗಿದ್ದಾರೆ.
ಅನಾಗೋಗ್ಯದಿಂದ ಬಳಲುತ್ತಿದ್ದ ನಿರ್ದೇಶಕ ಕೆ.ವಿ.ರಾಜು ಹಲವು ದಿನಗಳಿಂದ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಬೆಳಗ್ಗೆ 8 ಗಂಟೆಗೆ ಚಿಕಿತ್ಸೆ ಫಲಿಸಿದೆ ನಿಧನರಾಗಿದ್ದಾರೆ.
ರಾಜಾಜಿನಗರದ ಮನೆಯಲ್ಲಿಯೇ ಕೆ.ವಿ.ರಾಜು ಅವರ ಪಾರ್ಥೀವ ಶರೀರದ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ.ಹರಿಶ್ಚಂದ್ರ ಘಾಟ್‌ನಲ್ಲಿ ಅಂತ್ಯ ಸಂಸ್ಕಾರ ಮಾಡುವ ಬಗ್ಗೆ ಕುಟುಂಬದವರು ಮಾಹಿತಿ ನೀಡಿದ್ದಾರೆ.
ನಿರ್ದೇಶಕ ಕೆ.ವಿ.ರಾಜು ಕನ್ನಡ ಚಿತ್ರರಂಗದಲ್ಲಿ ಬರಹಗಾರರಾಗಿಯೂ ಗುರುತಿಸಿಕೊಂಡಿದ್ದರು.1984 ರಲ್ಲಿ ಒಲವೇ ಬದುಕು ಚಿತ್ರದ ಮೂಲಕ ಬರಹಗಾರರಾಗಿ ಹಾಗೂ ನಿರ್ದೇಶಕರಾಗಿ ಗುರುತಿಸಿಕೊಂಡರು.
ಕೆವಿ ರಾಜು ನಿರ್ದೇಶನದಲ್ಲಿ ಬಂಧ ಮುಕ್ತ,ಯುದ್ಧ ಕಾಂಡ,ಬೆಳ್ಳಿ ಮೋಡಗಳು,ಬೆಳ್ಳಿ ಕಾಲುಂಗುರ ಬಂದು ಜನ ಮೆಚ್ಚುಗೆ ಗಳಿಸಿವೆ.
PublicNext
24/12/2021 10:42 am