ಬೆಂಗಳೂರು:ಕನ್ನಡದ ಕೃಷ್ಣ ಅಜಯ್ ರಾವ್ ಮತ್ತು ನಿರ್ದೇಶಕ ನಿರ್ಮಾಪಕ ಗುರು ದೇಶಪಾಂಡೆ ನಡುವೆ ಏನೋ ಆಗಿದೆ.ಅದಕ್ಕೇನೆ ಅಜಯ್ ರಾವ್ ಲವ್ ಯು ರಚ್ಚು ಚಿತ್ರದ ಪ್ರೆಸ್ ಮೀಟ್‌ಗೆ ಬಂದಿರಲೇ ಇಲ್ಲ. ಹೌದು. ಈ ಮನಸ್ತಾಪಕ್ಕೆ ಇರೋ ಕಾರಣ ಈಗ ಬಹಿರಂಗ ಕೊಂಡಿದೆ.
ಅಜಯ್ ರಾವ್ ಬೇಸರಗೊಂಡಿದ್ದಾರೆ. ನಿರ್ದೇಶಕ-ನಿರ್ಮಾಪಕ ಗುರು ದೇಶಪಾಂಡೆ ನನಗೆ ಅವಮಾನ ಮಾಡಿದ್ದಾರೆ. ಹಾಗಾಗಿಯೇ ನಾನು ಪ್ರೆಸ್ ಮೀಟ್‌ಗೆ ಅಂದು ಬರಲಿಲ್ಲ ಅಂತಲೇ ಅಜಯ್ ಹೇಳಿಕೆ ಕೊಟ್ಟಿದ್ದಾರೆ.
ಗುರು ದೇಶ್‌ಪಾಂಡೆ ಕೂಡ ಈ ಒಂದು ಮಸ್ತಾಪದ ಹಿಂದಿನ ಸತ್ಯ ಬಿಚ್ಚಿಟ್ಟಿದ್ದಾರೆ. ಹೌದು ನನ್ನ ಮತ್ತು ಅಜಯ್ ರಾವ್ ನಡುವೆ ಮನಸ್ತಾಪ ಆಗಿದೆ. ಆದರೆ ಒಂದು ದೊಡ್ಡ ಮನೆಯಲ್ಲಿಯೆ ಸಣ್ಣ-ಪುಟ್ಟ ಜಗಳಗಳು ಇರುತ್ತವೆ. 150 ಜನ ಕೆಲಸ ಮಾಡುವ ಟೀಮ್ ನಲ್ಲಿ ಜಗಳಗಳು ಇರೋದಿಲ್ಲವೇ. ಅಷ್ಟೇ ಆಗಿರೋದು ಬೇರೆ ಏನೂ ಇಲ್ಲ ಅಂತಲೇ ಗುರ ದೇಶಪಾಂಡೆ ಹೇಳಿದ್ದಾರೆ. ನಾನು ಅಜಯ್‌ಗೆ ಅಪಮಾನ ಮಾಡಿಯೇ ಇಲ್ಲ ಅಂತಲೇ ತಿಳಿಸಿದ್ದಾರೆ.
PublicNext
22/12/2021 07:33 am