ಬಾಲಿವುಡ್ ನಟಿ ರೂಪದರ್ಶಿ ಊರ್ವಶಿ ರೌಟೇಲ ಸಿನಿ ಇಂಡಸ್ಟ್ರಿಯ ಅತ್ಯಂತ ಸುಂದರಿ ಹಾಗೂ ಸ್ಟೈಲಿಷ್ ತಾರೆ. ತಮ್ಮ ಲುಕ್ ನಿಂದಲೇ ಪಡ್ಡೆ ಹೈಕ್ಳ ಮನಸ್ಸು ಕದ್ದಿರೋ ಚೆಲುವೆ ಅದ್ಭುತ ಔಟ್ ಫಿಟ್ ಧರಿಸಿ ಇತ್ತೀಚೆಗೆ ಮಿಸ್ ಯುನಿವರ್ಸ್ 2021ಕ್ಕೆ ತೀರ್ಪುಗಾರರಾಗಿ ಭಾಗವಹಿಸಿ ಚಂದದ ಡ್ರೆಸ್ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.
ಮಿಸ್ ಯುನಿವರ್ಸ್ 2021ರಲ್ಲಿ(Miss Universe 2021) ಭಾಗವಹಿಸಿದ ಊರ್ವಶಿ ರೌಟೇಲಾ ಜೂರಿ ಮೆಂಬರ್ ಆಗಿ ಭಾಗವಹಿಸಿದ್ದರು. ಬ್ಲಾಕ್ ನೆಟ್ ಡ್ರೆಸ್ ನಲ್ಲಿ ಮಿಂಚಿದ್ದ ನಟಿಯ ಫ್ಯಾಷನ್ ಉಡುಗೆಯ ಬೆಲೆ ಬರೋಬ್ಬರಿ 40 ಲಕ್ಷ.ವಿಶೇಷವಾದ ಮೇಕಪ್ ನೊಂದಿಗೆ ಉಡುಗೆ ಇನ್ನಷ್ಟು ಗ್ಲಾಮರಸ್ ಆಗಿ ಕಾಣುತ್ತಿದೆ. ಡ್ರೆಸ್ ಜೊತೆಗೆ ಸ್ಮೋಕಿ ಐಸ್ ಲುಕ್ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಊರ್ವಶಿ ನಿಜವಾದ ಅದ್ಭುತ ಸುಂದರಿಯಾಗಿ ಕಾಣುವಂತೆ ಮಾಡಿದೆ.
ಆಕೆಯ ದೇಹದ ಮೇಲೆ ಸಾವಿರ ನಕ್ಷತ್ರಗಳು ಮಿನುಗುತ್ತಿರುವಂತೆ ತೋರುವ ಉಡುಗೆಯೊಂದಿಗೆ ಡ್ರೀಮಿ ಲುಕ್ ಕೊಟ್ಟಿದ್ದಾರೆ ನಟಿ.
PublicNext
21/12/2021 04:32 pm