ಮುಂಬೈ : 61 ವರ್ಷದ ಬಾಲಿವುಡ್ ನಟಿ ಸಂಗೀತಾ ಬಿಜ್ಲಾನಿಯ ಡ್ಯಾನ್ಸ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಮುಂಬೈನಲ್ಲಿ ನಡೆದ ವಿವಾಹ ಸಮಾರಂಭವೊಂದರಲ್ಲಿ ಸಂಗೀತಾ ಪಂಜಾಬೀ ಬೀಟ್ಸ್ಗೆ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾರೆ. ಜೊತೆಗೆ ಈ ವೀಡಿಯೋವನ್ನ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದು ಅಭಿಮಾನಿಗಳಿಂದ ಭಾರೀ ಪ್ರಶಂಸೆ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ತನ್ನ ಗಾರ್ಜಿಯಸ್ ಲುಕ್ನಿಂದಲೂ ಎಲ್ಲರನ್ನೂ ಅಟ್ರ್ಯಾಕ್ಟ್ ಮಾಡಿದ್ದಾರೆ. ಸಂಗೀತಾ ಬಿಜ್ಲಾನಿ 61 ನೇ ವಯಸ್ಸಿನಲ್ಲೂ ಇಷ್ಟೊಂದು ಫಿಟ್ನೆಸ್ ಮೆಂಟೇನ್ ಮಾಡಿಕೊಂಡು ಬಂದಿರೋ ಬಗ್ಗೆ ಸದಾ ಸುದ್ದಿಯಲ್ಲಿರ್ತಾರೆ. ಯೋಗ, ಜಿಮ್ ತಪ್ಪಿಸದ ಸಂಗೀತಾ ಈ ಇನ್ಸ್ಟಾಗ್ರಾಂನಲ್ಲಿ ತಮ್ಮ ವರ್ಕೌಟ್ ಫೋಟೋಸ್ ಶೇರ್ ಮಾಡುತ್ತಲೇ ಇರ್ತಾರೆ.
PublicNext
17/12/2021 01:30 pm