ಕಾನ್ಸೀಲಿಯಂ ಚಿತ್ರ ಸದ್ಯ ಥಿಯೇಟರ್‌ಗಳಲ್ಲಿ ಸೌಂಡ್ ಮಾಡುತ್ತಿದೆ. ಹೊಸಬರ ಪ್ರಯತ್ನಕ್ಕೆ ಗಾಂಧಿನಗರ ಕಣ್ಣು ಬಿಟ್ಟುಕೊಂಡು ಚಿತ್ರದ ಕಡೆ ಚಿತ್ತ ಹರಿಸಿದೆ. ಈ ಸಿನಿಮಾದಲ್ಲಿ ನಿರ್ಮಾಣ, ನಿರ್ದೇಶನ ಮಾಡಿರುವುದು ಬಹುತೇಕ ಎಂಜಿನಿಯರ್ಸ್ ಗಳೇ ಆಗಿದ್ದಾರೆ. ಅಲ್ಲದೆ 10 ವರ್ಷಗಳ ಸೇವಿಂಗ್ಸ್ ನಲ್ಲಿ ಚಿತ್ರದ ನಿರ್ದೇಶಕ ಹಾಗೂ ನಟ ಸಮರ್ಥ್ ಹಾಗೂ ಅವರ ಪತ್ನಿ ಚಿತ್ರಕ್ಕೆ ಹಣ ಹೂಡಿ 10 ವರ್ಷದ ಸೇವಿಂಗ್ಸನ್ನು ಸಿನಿಮಾ ಮಾಡಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಈ ಚಿತ್ರ ಉಪ್ಪಿ ಅವರ ಚಿತ್ರಗಳಂತೆಯೇ ಪ್ರೇಕ್ಷಕರ ತಲೆಗೆ ಹುಳ ಬಿಟ್ಟಿದೆ. ಲೈಫ್‌ನಲ್ಲಿ ಪ್ರಾಬ್ಲಂ ಬರೋದು ಯಾಕೆ? ಅದಕ್ಕೆ ಸಲ್ಯೂಷನ್ ಏನು ಅನ್ನೋದರ ಆಧಾರದ ಮೇಲೆಯೇ ಚಿತ್ರವನ್ನು ರೆಡಿ ಮಾಡಿದ್ದಾರೆ. ಈ ಕುರಿತು ಚಿತ್ರದ ಅಸೋಸಿಯೇಟ್ ಪ್ರೊಡ್ಯೂಸರ್ ರೇಶ್ಮಾ ರಾವ್ ಹಾಗೂ ಚಿತ್ರನ ನಿರ್ದೇಶಕ ಹಾಗೂ ನಟ ಸಮರ್ಥ್ ಪಬ್ಲಿಕ್ ನೆಕ್ಸ್ಟ್ ಜತೆ ಮಾತನಾಡಿದ್ದಾರೆ.
PublicNext
16/12/2021 12:13 pm