ಬೆಂಗಳೂರು: ಪವರ್ ಸ್ಟಾರ್ ಪುನೀತ್ ಅಭಿನಯದ ಜೇಮ್ಸ್ ರಿಲೀಸ್ ಆಗುವುದಕ್ಕೆ ರೆಡಿ ಆಗುತ್ತಿದೆ. ಡಾರ್ಲಿಂಗ್ ಕೃಷ್ಣ ಅಭಿನಯದ 'ಲಕ್ಕಿಮ್ಯಾನ್' ಚಿತ್ರದಲ್ಲೂ ಪುನೀತ್ ಅಭಿನಯಿಸಿರೋದು ವಿಶೇಷ. ಈಗ ಈ ಚಿತ್ರದ ಪುನೀತ್ ಅಭಿನಯದ ದೃಶ್ಯ ತುಣುಕೊಂದು ಈಗ ರಿವೀಲ್ ಆಗಿದೆ. ಅದನ್ನ ಚಿತ್ರದ ನಾಯಕ ಡಾರ್ಲಿಂಗ್ ಕೃಷ್ಣ ರಿವೀಲ್ ಮಾಡಿದ್ದಾರೆ.
ಡಾರ್ಲಿಂಗ್ ಕೃಷ್ಣ ಅಭಿನಯದ ಲಕ್ಕಿಮ್ಯಾನ್ ಚಿತ್ರದಲ್ಲಿ ಪುನೀತ್ ವಿಶೇಷವಾಗಿಯೇ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಬರುವ ರಾಜ್‌ಕುಮಾರ್ ಅವರ ಮೇಲೆ ಇರೋ ಹಾಡಿನಲ್ಲಿಯೇ ಡಾನ್ಸ್ ಮಾಡಿದ್ದಾರೆ. ಪ್ರಭುದೇವಾ ಕೂಡ ಪುನೀತ್ ಜೊತೆಗೆ ನೃತ್ಯ ಮಾಡಿರೋದು ವಿಶೇಷ.
ಇದರ ಹೊರತಾಗಿ ಡಾರ್ಲಿಂಗ್ ಕೃಷ್ಣ ಜೊತೆಗೆ ಒಂದಷ್ಟು ಸೀನ್ ಗಳಲ್ಲೂ ಪುನೀತ್ ಅಭಿನಯಿಸಿದ್ದಾರೆ. ಅದೇ ದೃಶ್ಯಕ್ಕೇನೆ ಡಾರ್ಲಿಂಗ್ ಕೃಷ್ಣ ಈಗ ಡಬ್ಬಿಂಗ್ ಮಾಡಿದ್ದಾರೆ. ಡಬ್ಬಿಂಗ್ ಮಾಡುವಾಗ ಪುನೀತ್ ಇಲ್ಲ ಅನ್ನೋ ನೋವೂ ಇತ್ತು. ಆದರೆ ದೃಶ್ಯ ಚಿತ್ರೀಕರಿಸುವ ಸಮಯ ತುಂಬಾನೇ ವಿಶೇಷವಾಗಿಯೇ ಇತ್ತು. ನಿಜಕ್ಕೂ ಈ ದಿನದ ಡಬ್ಬಿಂಗ್ ಎಂದೂ ಮರೆಯೋಕೆ ಆಗೋದೇ ಇಲ್ಲ ಅಂತ ಡಾರ್ಲಿಂಗ್ ಕೃಷ್ಣ ಸಾಮಾಜಿಕ ತಾಣದಲ್ಲಿ ಬರೆದುಕೊಂಡಿದ್ದಾರೆ.
PublicNext
11/12/2021 07:18 pm