ಮುಂಬೈ: ಷರತ್ತು ಬದ್ದ ಜಾಮೀನಿನ ಮೇಲೆ ಹೊರ ಬಂದಿರೋ ಆರ್ಯನ್ ಖಾನ್,ಪ್ರತಿ ವಾರ ಎನ್‌ಸಿಬಿ ಕಚೇರಿಗೆ ಹಾಜರಿ ಕೊಡಲೇಬೇಕು. ಅದಕ್ಕೇನೆ ಈಗ ಆರ್ಯನ್ ಖಾನ್ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಆರ್ಯನ್ ಖಾನ್ ಎನ್‌ಸಿಬಿ ಕಚೇರಿಗೆ ಪ್ರತಿ ವಾರ ಭೇಟಿಕೊಡಲೇಬೇಕಾಗಿದೆ. ಹೀಗೆ ವಾರಕೊಮ್ಮೆ ಭೇಟಿಕೊಡುವ ಸಮಯದಲ್ಲಿ ಮಾಧ್ಯಮಗಳೂ ಹೆಚ್ಚು ಇರುತ್ತವೆ. ಇದರಿಂದ ಹೆಚ್ಚಿನ ತೊಂದರೆನೂ ಆಗುತ್ತದೆ ಎಂದಿದ್ದಾರೆ ಆಯರ್ನ್ ಖಾನ್.
ಸದ್ಯ ತನಿಖೆಯನ್ನ ದೆಹಲಿ ತಂಡಕ್ಕೆ ವರ್ಗಾಯಿಸಲಾಗಿದೆ. ಹಾಗಾಗಿಯೇ ಸಾಪ್ತಾಹಿಕ ಭೇಟಿಯನ್ನ ಸಡಿಲಿಸಬಹುದು ಅನ್ನೋ ಆಧಾರದ ಮೇಲೆನೆ ಆರ್ಯನ್ ಖಾನ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
PublicNext
10/12/2021 07:55 pm