ಮುಂಬೈ: ಬಾಲಿವುಡ್ ಬಚ್ಚನ್ ಕೌನ್ ಬನೇಗಾ ಕರೋಡಪತಿ ಸೀಸನ್-13 ರನ್ನ ಈಗ ಹೋಸ್ಟ್ ಮಾಡ್ತಿದ್ದಾರೆ. ಹಾಗೇನೆ ಈಗ ಶೋದ ಒಟ್ಟು ಸಂಚಿಕೆ 1000 ಕೂಡ ಆಗಿದೆ. ಈ ಹಿನ್ನೆಲೆಯಲ್ಲಿಯೇ ಕೆಬಿಸಿ ಫ್ಯಾಮಿಲಿ ಶೋನೇ ಈಗ ವಿಶೇಷವಾಗಿ ನಡೆಯುತ್ತಿರೋದು.ಇದೇ ಟೈಮ್‌ನಲ್ಲಿಯೇ ಅಮಿತಾಭ್ ಬಚ್ಚನ್ ಆ ಒಂದು ರಹಸ್ಯ ಬಿಚ್ಚಿಟ್ಟಿದ್ದಾರೆ. ಬನ್ನಿ, ಹೇಳ್ತೀವಿ.
ಅಮಿತಾಭ್ ಬಚ್ಚನ್ ಹೋಸ್ಟ್ ಮಾಡುವ ಕೆಬಿಸಿಗೆ ಅಮಿತಾಭೇ ಒಂದು ದೊಡ್ಡ ಶಕ್ತಿ.ಇವರಿಗೇನೆ ಹೇಳಿ ಮಾಡಿಸಿದಂತಿದೆ ಈ ಶೋ. ಇದಕ್ಕೂ ಹೆಚ್ಚಾಗಿ ಬಚ್ಚನ್ ಕಂಠಸಿರಿ ಇದೆ ನೋಡಿ ಅದು ಇಡೀ ಶೋನ ಒಂದು ದೊಡ್ಡ ಘನತೆನೇ ಸರಿ. ಇಂತಹ ಶೋದಲ್ಲಿ ಅಮಿತಾಭ್ ಬಚ್ಚನ್ ಫ್ಯಾಮಿಲಿ ಕೂಡ ಭಾಗಿ ಆಗಿತ್ತು.
ಅಮಿತಾಭ್ ಬಚ್ಚನ್ ಮಗಳು ಶ್ವೇತಾ ಬಚ್ಚನ್ ಮೊಮ್ಮಗು ನವ್ಯಾ ನವೇಲಿ ಕೂಡ ಭಾಗಿ ಆಗಿದ್ದರು. ಪತ್ನಿ ಜಯಾ ಬಚ್ಚನ್ ವೀಡಿಯೋ ಕಾನ್ಫರೆನ್ಸ್ ಮೂಲಕ ಭಾಗಿ ಆಗಿದ್ದರು.
ಇದೇ ವೇಳೆನೇ ಪುತ್ರಿ ಶ್ವೇತಾ, 'ಪಾಪಾ ನೀವೂ ಯಾಕೆ ಈ ಶೋ ಒಪ್ಪಿಕೊಡದ್ದು ಅಂತಲೇ ಕೇಳ್ತಾರೆ.' ಅದಕ್ಕೆ ಅಮಿತಾಭ್ ಹೀಗೆ ಉತ್ತರವನ್ನ ಕೊಟ್ಟಿದ್ದಾರೆ. ದೊಡ್ಡ ಪರದೆಯಿಂದ ಈ ಪುಟ್ಟ ಪರದೆಗೆ ಬಂದಾಗ ಅನೇಕ ಕಾಮೆಂಟ್ ಬಂದವು.
ಆದರೆ ನನಗೆ ವಿಶ್ವಾಸ ಇತ್ತು. ಈ ಶೋ ಹಿಟ್ ಆಗುತ್ತದೆ ಅಂತ. ಅದಕ್ಕೇನೆ ಪ್ಪಿಕೊಂಡಿದ್ದೆ. ಇಲ್ಲಿ ಬರುವ ಸ್ಪರ್ಧಿಗಳಿಂದಲೂ ನಾನು ಸಾಕಷ್ಟು ವಿಷಯ ತಿಳಿದುಕೊಂಡೆ ಅಂತಲೂ ಅಮಿತಾಭ್ ಬಚ್ಚನ್ ಹೇಳಿಕೊಂಡಿದ್ದಾರೆ.
PublicNext
04/12/2021 05:01 pm