ಮುಂಬೈ: 'ಮಿರ್ಜಾಪುರ್' ವೆಬ್ ಸೀರೀಸ್‌ನಲ್ಲಿ ಲಲಿತ್ ಪಾತ್ರದಲ್ಲಿ ನಟಿಸಿ ಖ್ಯಾತಿ ಗಳಿಸಿದ್ದ ನಟ ಬ್ರಹ್ಮ ಮಿಶ್ರಾ (36) ಇಂದು ಮುಂಬೈನ ವರ್ಸೋವಾದಲ್ಲಿರುವ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಿಶ್ರಾ ಅವರು ಮುಂಬೈ ನಿವಾಸದಲ್ಲಿ ಒಬ್ಬರೇ ವಾಸಿಸುತ್ತಿದ್ದರು. ಮನೆಯ ಬಾತ್ರೂಮ್ನಲ್ಲಿ ಇಂದು ಶವವಾಗಿ ಪತ್ತೆಯಾಗಿದ್ದಾರೆ. ಹೃದಯಾಘಾತದಿಂದ ಮೃತಪಟ್ಟಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಸದ್ಯ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸ್ಥಳಾಂತರಿಸಲಾಗಿದೆ.
ಘಟನಾ ಸ್ಥಳಕ್ಕೆ ತೆರಳಿದಾಗ ಮನೆಯ ಒಳಗಿಂದ ಬಾಗಿಲು ಲಾಕ್ ಆಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರಗೊಂಡ ಮಿರ್ಜಾಪುರ್ ವೆಬ್ ಸರಣಿ ಹಿಟ್ ಆಗಿ, ತಮ್ಮ ನಟನೆಯ ಮೂಲಕ ಬ್ರಹ್ಮ ಮಿಶ್ರಾ ಪ್ರೇಕ್ಷಕರ ಮನಗೆದ್ದಿದ್ದರು. ಈ ಬಗ್ಗೆ 'ಅಮೆಜಾನ್ ಪ್ರೈಮ್ ವಿಡಿಯೋ ಇಂಡಿಯಾ' ಸಂತಾಪ ಸೂಚಿಸಿದ್ದು, "ಬ್ರಹ್ಮ ಮಿಶ್ರಾ, ನಮ್ಮ ಲಲಿತ್. ನಮ್ಮನ್ನು ನಗಿಸಿದ್ದಕ್ಕಾಗಿ, ನಮ್ಮನ್ನು ಅಳಿಸಿದ್ದಕ್ಕಾಗಿ ಧನ್ಯವಾದಗಳು.
PublicNext
02/12/2021 10:51 pm