ಹಾಲಿವುಡ್ ಗಾಯಕಿ ಮಡೋನಾ ಈಗ ಇನ್‌ಸ್ಟಾಗ್ರಾಮ್ ಮೇಲೆ ಸಿಟ್ಟಾಗಿದ್ದಾರೆ. ಇವರ ಸಿಟ್ಟಿಗೆ ಕಾರಣ ಆ ಒಂದು ಫೋಟೋ. ತಮ್ಮ ಆ ಒಂದು ಫೋಟೋವನ್ನ ಯಾಕೆ ತೆಗೆದು ಹಾಕಿದ್ದೀರಾ ಅಂತಲೇ ಕೇಳ್ತಿದ್ದಾರೆ.
ಗಾಯಕಿ ಮಡೋನಾ ಇತ್ತೀಚಿಗೆ ತಮ್ಮ ಒಂದು ಫೋಟೋವನ್ನ ಇನ್‌ಸ್ಟಾಗ್ರಾಮ್ ನಲ್ಲಿ ಹಾಕಿದ್ದರು.ಇನ್‌ಸ್ಟಾ ಗ್ರಾಮ್ ಪ್ರಕಾರ ಇದು ಅರೆನಗ್ನ ಚಿತ್ರವೇ ಆಗಿದೆ. ಸಾಕಷ್ಟು ಪ್ರಚೋದನಾಕಾರಿಯೂ ಆಗಿದೆ.
ಆದರೆ ಮಡೋನಾ ಇದು ಅಂತ ಫೋಟೋ ಅಲ್ಲವೇ ಅಲ್ಲ ಅಂತವ್ರೆ. ಹಾಗೇನೆ ನನಗೆ ಹೇಳದೆ ಕೇಳದೇನೆ ಆ ಫೋಟೋ ಯಾಕೆ ತೆಗೆದುಹಾಕಿದ್ದೀರಾ ಅಂತಲೇ ಮಡೋನಾ ಕೆಂಡಾಮಂಡಲ ಆಗಿದ್ದಾರೆ.
PublicNext
26/11/2021 05:18 pm