ಬೆಂಗಳೂರು: ದರ್ಶನ್ ಅವರ ಅಭಿಮಾನಿಗಳಿಂದ ನನ್ನ ಕಿವಿಗಳೇ ಹೋಗಿವೆ ಎಂದು ಹಿರಿಯ ಸಾಹಿತಿ ಗೊ.ರು ಚನ್ನಬಸಪ್ಪ ಬೇಸರದಿಂದ ಹೇಳಿದ್ದಾರೆ.
ಬೆಂಗಳೂರಿನ ರಮಣಶ್ರೀ ಹೊಟೇಲ್‌ನಲ್ಲಿ ರಮಣಶ್ರೀ ಶರಣರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹಾಗೂ ರಮಣಶ್ರೀ ಪ್ರತಿಷ್ಠಾನದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅಚರು ತಮ್ಮ ಶ್ರವಣ ಶಕ್ತಿ ಕಡಿಮೆಯಾದ ಬಗ್ಗೆ ಹೇಳಿಕೊಂಡಿದ್ದಾರೆ.
ಈ ಮಾತನ್ನ ಅವರು ಸಿಎಂ ಬಸವರಾಜ್ ಬೊಮ್ಮಾಯಿ, ನಿವೃತ್ತ ಐಎಎಸ್ ಅಧಿಕಾರಿ ಮನು ಬಳಿಗಾರ್, ಶಿಕ್ಷಣ ತಜ್ಞ ಡಾ. ಗುರುರಾಜ್ ಕರ್ಜಗಿ ಹಾಗೂ ಅನೇಕ ಗಣ್ಯರ ಸಮ್ಮುಖದಲ್ಲೇ ಹೇಳಿದ್ದಾರೆ. ಗೊ.ರು ಚನ್ನಬಸಪ್ಪ ಅವರ ಮನೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿನ ನಟ ದರ್ಶನ್ ಮನೆ ಹತ್ತಿರದಲ್ಲೇ ಇದೆ. ದರ್ಶನ್ ಅವರ ಜನ್ಮದಿನದಂದು ಮನೆ ಬಳಿ ಬಂದ ಅಭಿಮಾನಿಗಳು ಭಾರಿ ಸದ್ದಿನ ಪಟಾಕಿ ಹೊಡೆದಿದ್ದಾರೆ. ಇದರಿಂದ ನನ್ನ ಶ್ರವಣ ಶಕ್ತಿ ಕುಂದಿದೆ. ಹೀಗಾಗಿ ಕಾರ್ಯಕ್ರಮದಲ್ಲಿ ಗಣ್ಯರು ಮಾತನಾಡಿದ್ದು ನನಗೆ ಸರಿಯಾಗಿ ಕೇಳಿಸಲಿಲ್ಲ. ಎಂದು ಗೊ.ರು ಚನ್ನಬಸಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
PublicNext
17/11/2021 06:44 pm