ಕೊಪ್ಪಳ : ಸ್ಯಾಂಡಲ್ ವುಡ್ ನಟ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ಮರಣದಿಂದ ಕಣ್ಣೀರಿಡದವರಿಲ್ಲ. ಇಂದು ಅವರು ನಮ್ಮೊಂದಿಗೆ ಇಲ್ಲಾ ಎನ್ನುವ ಸತ್ಯವನ್ನು ಯಾರು ಕೂಡಾ ಒಪ್ಪುತ್ತಿಲ್ಲ. ಇದರ ಮಧ್ಯೆ ಅವರ ಅಭಿಮಾನಿಗಳು ನಿತ್ಯ ಒಂದಿಲ್ಲೊಂದು ಒಳ್ಳೆಯ ಕಾರ್ಯಗಳಿಂದ ಹಾಗೂ ವಿಭಿನ್ನವಾಗಿ ಅಪ್ಪು ಅಭಿಮಾನ ತೋರುವ ಮೂಲಕ ಸುದ್ದಿಯಲ್ಲಿದ್ದಾರೆ.
ಸದ್ಯ ಕೊಪ್ಪಳ ಜಿಲ್ಲೆ ಕುಕನೂರ ಬಸ್ ನಿಲ್ದಾಣದಲ್ಲಿ ಬಸ್ ಮೇಲಿನ ಪುನೀತ್ ಭಾವಚಿತ್ರಕ್ಕೆ ಅಜ್ಜಿಯೊಬ್ಬರು ಮುತ್ತಿಡೋ ವಿಡಿಯೋ ವೈರಲ್ ಆಗಿದೆ. ಬಸ್ ಮೇಲಿದ್ದ ಪುನೀತ್ ಭಾವಚಿತ್ರದ ಮೇಲಿನ ಧೂಳನ್ನು ತನ್ನ ಸೆರಗಿನಿಂದ ಒರೆಸುತ್ತಿರುವ ಅಜ್ಜಿ ತನ್ನ ಕೈಗಳಿಂದ ಮುಟ್ಟಿ ಮುಟ್ಟಿ ಮುತ್ತಿಡೋ ಹೃದಯ ಸ್ಪರ್ಶಿ ವಿಡಿಯೋ ಸ್ಥಳೀಯರ ಕ್ಯಾಮೆರಾದಲ್ಲಿ ಸೆರೆಯಾಗಿದೆ.
PublicNext
13/11/2021 11:20 am