ಮುಂಬಯಿ:ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಜೊತೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಪತಿ ರಾಜ್ ಕುಂದ್ರಾ ಜೈಲಿನಿಂದ ಹೊರ ಬಂದ್ಮೇಲೆ ರಾಜ್ ಕುಂದ್ರಾ ಮತ್ತು ಶಿಲ್ಪಾ ಎಲ್ಲೂ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಆದರೆ ಈಗ ಇವರು ಜೊತೆಗೂಡಿ ದೇವಸ್ಥಾನಕ್ಕೂ ಹೋಗಿ ಬಂದಿದ್ದಾರೆ.
ರಾಜ್ ಕುಂದ್ರಾ ನೀಲಿ ಚಿತ್ರ ನಿರ್ಮಾಣದ ಹಿನ್ನೆಲೆಯಲ್ಲಿ ಜೈಲು ವಾಸ ಮಾಡಿ ಬಂದಿದ್ದಾರೆ. ಈ ಒಂದು ಬೆಳವಣಿಗೆ ಬಳಿಕ ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ವಿಚ್ಛೇದನ ಪಡೀತಾರೆ ಅನ್ನೋ ವಿಷಯವೂ ಭಾರಿ ವೈರಲ್ ಆಗಿತ್ತು. ಅದಕ್ಕೆ ಪೂರಕ ಅನ್ನೋ ಹಾಗೇನೆ ಶಿಲ್ಪಾ ಶೆಟ್ಟಿ ಎಲ್ಲೂ ಪತಿ ಜೊತೆಗೆ ಕಾಣಿಸಿಕೊಂಡಿರಲಿಲ್ಲ.
ಆದರೆ ಈಗ ಹಿಮಾಚಲ ಪ್ರದೇಶದ ಧರ್ಮಶಾಲಾದ ದೇವಸ್ಥಾನಕ್ಕೆ ಇಬ್ಬರೂ ಹೋಗಿ ಬಂದಿದ್ದಾರೆ. ಹೀಗೆ ಜೊತೆ ಜೊತೆಯಲ್ಲಿಯೇ ಓಡಾಡಿದ ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ಫೋಟೋಗಳು ವೀಡಿಯೋಗಳು ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
PublicNext
11/11/2021 08:16 am